ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಡಳಿತಾರೂಢ ಆಮ್ ಆದ್ಮಿ ಪಕ್ಷ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, “ಕಳೆದ 10 ವರ್ಷಗಳಿಂದ ದೆಹಲಿಯಲ್ಲಿ ಅಧಿಕಾರದಲ್ಲಿರುವವರು ಶಾಲಾ ಶಿಕ್ಷಣವನ್ನು ಹಾಳು ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.
ಅಶೋಕ್ ವಿಹಾರ್ನ ರಾಮಲೀಲಾ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ನಜಾಫ್ಗಢದಲ್ಲಿ ವೀರ್ ಸಾವರ್ಕರ್ ಹೆಸರಿನಲ್ಲಿ ಹೊಸ ಕಾಲೇಜು ನಿರ್ಮಾಣವಾಗಲಿದೆ… ಕಳೆದ 10 ವರ್ಷಗಳಿಂದ ದೆಹಲಿಯಲ್ಲಿ ಅಧಿಕಾರದಲ್ಲಿರುವವರು ಅರ್ಧದಷ್ಟು ಹಣವನ್ನು ಶಿಕ್ಷಣಕ್ಕಾಗಿ ಖರ್ಚು ಮಾಡಿಲ್ಲ … ” ಎಂದು ವಾಗ್ದಾಳಿ ನಡೆಸಿದ್ದಾರೆ.
“ಸ್ವಾತಂತ್ರ್ಯದ ನಂತರವೂ ಹೊಸ ಶಿಕ್ಷಣ ನೀತಿ ಮಾಡಿಲ್ಲ, ‘ಲೇಕಿನ್ ಆಪ್ಕೆ ಸೇವಕ್ ನೇ ಕರ್ ದಿಯಾ’. ದೆಹಲಿಯ ಮತದಾರರು ದೆಹಲಿಯನ್ನು ಮುಕ್ತಗೊಳಿಸಲು ಮನಸ್ಸು ಮಾಡಿದ್ದಾರೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.