ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ದಂಪತಿಗೆ ಕೆಲ ತಿಂಗಳ ಹಿಂದಷ್ಟೆ ಮುದ್ದಾದ ಮಗು ಜನಿಸಿದೆ. ಇದೀಗ ಈ ಜೋಡಿ ಕುಟುಂಬದೊಡನೆ ಕೊಲ್ಲೂರಿನ ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಅವರುಗಳು ಮಗು ಜನಿಸಿದ ಬಳಿಕ ಕೊಲ್ಲೂರು ಮೂಕಾಂಭಿಕೆ ದೇವಾಲಯಕ್ಕೆ ಆಗಮಿಸಿ, ಪೂಜೆ ಮಾಡಿಸುವುದಾಗಿ ಹರಕೆ ಹೊತ್ತಿದ್ದರಂತೆ. ಅದನ್ನು ತೀರಿಸಲೆಂದು ಇಂದು ದೇವಾಲಯಕ್ಕೆ ಆಗಮಿಸಿದ್ದಾರೆ.
ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣ ಅವರ ಜೊತೆಗೆ ಅವರ ಕುಟುಂಬ ಸದಸ್ಯರು ಸಹ ದೇವಾಲಯಕ್ಕೆ ಆಗಮಿಸಿದ್ದರು. ದೇವಾಲಯಕ್ಕೆ ವಿಶೇಷ ಪೂಜೆ ಮಾಡಿಸಿ ತೀರ್ಥ, ಪ್ರಸಾದಗಳನ್ನು ಕುಟುಂಬದವರು ಸ್ವೀಕಾರ ಮಾಡಿದ್ದಾರೆ.