ಇಂದಿರಾಗಾಂಧಿ ಪವರ್‌ಫುಲ್‌ ಲೀಡರ್‌ ಅಲ್ಲ, ವೀಕ್‌ : ಕಂಗನಾ ಕಾಂಟ್ರವರ್ಸಿ ಕಮೆಂಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ತಮ್ಮ ಹೊಸ ಚಿತ್ರ “ಎಮರ್ಜೆನ್ಸಿ”ಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರ ನಿರ್ವಹಿಸುತ್ತಿರುವ ನಟಿ ಹಾಗೂ ಸಂಸದೆ ಕಂಗನಾ ರನೌತ್ ದೇಶದ ಮೊದಲ ಮಹಿಳಾ ಪ್ರಧಾನಿ ಬಗ್ಗೆ ಕುತೂಹಲಕರ ವಿಚಾರ ಹೇಳಿದ್ದಾರೆ. ಇಂದಿರಾ ಗಾಂಧಿ ಪಾತ್ರಕ್ಕಾಗಿ ತಾವು ಸಾಕಷ್ಟು ಸಂಶೋಧನೆ ಮಾಡಿದ್ದು, ಇಂದಿರಾ ಗಾಂಧಿಯವರು ಅಷ್ಟು ಪ್ರಬಲವಾಗಿರಲಿಲ್ಲ. ದುರ್ಬಲವಾಗಿದ್ದು, ಅವರ ಬಗ್ಗೆಅವರಿಗೇ ಖಚಿತತೆ ಇರಲಿಲ್ಲ ಎಂದಿದ್ದಾರೆ.

ಹಿಮಾಚಲ ಪ್ರದೇಶದ ಮಂಡಿಯಿಂದ ಮೊದಲ ಬಾರಿಗೆ ಸಂಸದೆಯಾಗಿರುವ, ಆಗಾಗ್ಗೆ ತಮ್ಮ ಪ್ರಚೋದನಕಾರಿ ಹೇಳಿಕೆಗಳಿಗಾಗಿ ಸುದ್ದಿಯಲ್ಲಿರುವ ಕಂಗನಾ ರನೌತ್, ಇಂದು ನನಗೆ ನಿರ್ದೇಶನ ಮಾಡಲು ಅರ್ಹರಾದ ನಿರ್ದೇಶಕರು ಯಾರೂ ಇಲ್ಲ ಎಂದು ಹೇಳಿದ್ದಾರೆ.

ಇಂದು ಚಲನಚಿತ್ರೋದ್ಯಮದಲ್ಲಿ ನಾನು ಕೆಲಸ ಮಾಡಲು ಬಯಸುವ ಒಬ್ಬ ನಿರ್ದೇಶಕರೂ ಇಲ್ಲ. ಅವರು ನನಗೆ ನಿರ್ದೇಶನ ಮಾಡಲು ಅರ್ಹರು ಎಂದು ನಾನು ಭಾವಿಸುವ ಗುಣಮಟ್ಟವನ್ನು ಹೊಂದಿಲ್ಲ ಎಂದು ರನೌತ್ ಎಂದು ವೀಡಿಯೊ ಸಂದರ್ಶನದಲ್ಲಿ ಹೇಳಿದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!