ನಿನ್ನ ಕೊಂದು ತೆಗೆಯುತ್ತಾರೆ…ನಾನು ಆತನಿಗೆ ಎಚ್ಚರಿಸಿದ್ದೆ: ಸುಶಾಂತ್ ಸಾವಿನ ಕುರಿತು ನಟ ಮನೋಜ್ ಮಾತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತು ದಿ ಫ್ಯಾಮಿಲಿ ಮ್ಯಾನ್’ ನಟ ಮನೋಜ್ ಬಾಜಪೇಯಿ ಅವರು ಮಾತನಾಡಿದ್ದಾರೆ.

ಚಿತ್ರರಂಗದಲ್ಲಿ ನಡೆದ ರಾಜಕೀಯದಿಂದ ಅವರು ಮೃತಪಟ್ಟರು. ವೈಯಕ್ತಿಕವಾಗಿ ಸಾಕಷ್ಟು ನಷ್ಟವಾಗಿದೆ ಎಂದು ಮನೋಜ್ ಅವರು ಹೇಳಿದ್ದಾರೆ.

ನಾನು ಹಾಗೂ ಸುಶಾಂತ್ ಇಂಡಸ್ಟ್ರಿ ಪಾಲಿಟಿಕ್ಸ್ ಬಗ್ಗೆ ಮಾತನಾಡುತ್ತಿದ್ದೆವು. ಯಾವಾಗಲೂ ದಪ್ಪ ಚರ್ಮ ಹೊಂದಿರಬೇಕು ಇಲ್ಲದಿದ್ದರೆ ಇವರು ನಿನ್ನ ಕೊಂದು ತೆಗೆಯುತ್ತಾರೆ ಎಂದು ಅವನಿಗೆ ಎಚ್ಚರಿಸಿದ್ದೆ. ನಾನು ಸಾಕಷ್ಟು ರಿಜೆಕ್ಷನ್ ಗಳನ್ನು ನೋಡಿದ್ದೇನೆ. ನನ್ನದು ಒರಟು ಚರ್ಮ. ನನ್ನ ಅನೇಕ ಗೆಳೆಯರಿಗೆ ನನ್ನ ರೀತಿಯ ಗುಣ ಇಲ್ಲ. ನನ್ನಂತೆ ಅವರು ರಿಜೆಕ್ಷನ್ ಗಳನ್ನು ಎದುರಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ .

ಸುಶಾಂತ್ ಯಾವಾಗಲೂ ಮೂಡಿ ಆಗಿದ್ದ. ಅಶುತೋಶ್ ರಾಣಾ, ರಣವೀರ್ ಶೋರೆ, ಸುಶಾಂತ್ ಸಿಂಗ್ ಹಾಗ ನಾನು ಒಂದೇ ರೀತಿ ಆಲೋಚಿಸುತ್ತಿದ್ದೆವು. ನಾವು ಆಗಾಗ ಭೇಟಿ ಮಾಡುತ್ತಿದ್ದೆವು. ಕೋವಿಡ್ ಬರುವುದಕ್ಕೂ ಮೊದಲು ಸುಶಾಂತ್ ನನಗೆ ಕರೆ ಮಾಡಿ, ನೀವು ಮಾಡುವ ಮಟನ್ ಕರಿ ತಿನ್ನಬೇಕು ಎನಿಸುತ್ತಿದೆ ಎಂದಿದ್ದರು. ಮುಂದೆ ಯಾವಾಗದರೂ ಮಾಡಿದರೆ ನನ್ನನ್ನು ಕರೆಯಿರಿ ಎಂದಿದ್ದರು’ ಎಂಬುದಾಗಿ ಹಳೆಯ ಘಟನೆ ಬಗ್ಗೆ ಮನೋಜ್ ಹೇಳಿದ್ದಾರೆ.

ಅವನಿಗೆ ಏನಾಗಿದೆ ಎಂದು ಯಾರಿಗೂ ತಿಳಿದಿಲ್ಲ. ನಾವು ಎಲ್ಲವನ್ನೂ ಊಹಿಸಬಹುದಷ್ಟೇ. ನಾನು ಅವನ ಜೊತೆ ಕೆಲಸ ಮಾಡಿದ್ದೇನೆ. ಅವನು ಈ ರೀತಿಯ ಹುಡುಗನಲ್ಲ. ಅವನು ಯಾವಾಗಲೂ ಓದುತ್ತಾ ಇರುತ್ತಿದ್ದ. ಸೆಟ್ ಒಳಗೂ, ಹೊರಗೂ ಇದೇ ರೀತಿ ಇರುತ್ತಿದ್ದ’ಎಂದಿದ್ದಾರೆ ಮನೋಜ್.

‘ಅವನಿಗೆ ಫಿಸಿಕ್ಸ್ ಬಗ್ಗೆ ಸಾಕಷ್ಟು ಜ್ಞಾನ ಇತ್ತು. ಆಧ್ಯಾತ್ಮದ ಬಗ್ಗೆ ಮಾತನಾಡುತ್ತಿದ್ದ. ಅದನ್ನು ಕ್ವಾಂಟಂ ಫಿಸಿಕ್ಸ್ ಜೊತೆ ಹೋಲಿಕೆ ಮಾಡುತ್ತಿದ್ದ. ಅವನಿಗೆ ಅದ್ಭುತ ಜ್ಞಾನ ಇತ್ತು. ಸಿಬಿಐ ಕೂಡ ತನಿಖೆ ನಡೆಸುತ್ತಲೇ ಇದೆ. ಅವನು ಸತ್ತಾಗ ನಾನು ಮೂರು ತಿಂಗಳು ದುಃಖದಲ್ಲೇ ಇದ್ದೆ’ ಎಂದಿದ್ದಾರೆ ಮನೋಜ್ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!