ಹೊಸದಿಗಂತ ಡಿಜಿಟಲ್ ಡೆಸ್ಕ್:
ಶೃಂಗೇರಿ ಶ್ರೀ ಶಾರದಾ ಪೀಠ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ. ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿಗಳವರ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವ ಸಲುವಾಗಿ ಸ್ತೋತ್ರ ತ್ರಿವೇಣಿಯ ಮಹಾಸಮರ್ಪಣೆ ಅದ್ದೂರಿಯಾಗಿ ನಡೆಯಿತು.
ಜಗದ್ಗುರಗಳು ಸನ್ಯಾಸ ಸ್ವೀಕಾರದ ಐವತ್ತನೆಯ ವರ್ಷದ ಸ್ವರ್ಣ ಮಹೋತ್ಸವವನ್ನು ‘ಸುವರ್ಣಭಾರತೀ’ ಎಂದು ಆಚರಿಸಲಾಯಿತು.
ರಾಜ್ಯದ ವಿವಿಧ ಭಾಗದಿಂದ ಆಗಮಿಸಿದ್ದ ಮಹಿಳೆಯರು ಹಾಗೂ ಜಿಲ್ಲೆಯ ಎಲ್ಲಾ ತಾಲೂಕಿನಿಂದ ಆಗಮಿಸಿದ್ದ ಶಾಲಾ ಮಕ್ಕಳ ಸಹಿತ 75 ಸಾವಿರ ಮಂದಿ ಒಂದೇ ವೇದಿಕೆಯಲ್ಲಿ ಏಕಧ್ವನಿಯಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯ ವಿರಚಿತ ಕಲ್ಯಾಣವೃಷ್ಟಿಸ್ತವ, ಶಿವಪಂಚಾಕ್ಷರ ನಕ್ಷತ್ರಮಾಲಾ ಸ್ತೋತ್ರ ಮತ್ತು ಲಕ್ಷ್ಮೀನೃಸಿಂಹ ಕರಾವಲಂಬ ಸ್ತೋತ್ರಗಳನ್ನು ಪಠಿಸಲಾಯಿತು.
ಈ ವೇಳೆ ಆರ್ಶೀವಚನ ನೀಡಿದ ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು ಮಾನಸಿಕ ಮತ್ತು ದೈಹಿಕ ದೃಢತೆಗೆ ಅಧ್ಯಾತ್ಮ ಪೂರಕ ಎಂದು ಹೇಳಿದರು.
ಸನ್ನಿದಧಾನಂಗಳು ಎಳೆಹರೆಯದಲ್ಲಿಯೇ ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೊಳ್ಳಬೇಕು. ಮಕ್ಕಳಿಗೂ ಆ ಬಗ್ಗೆ ಒಲವು ಮೂಡಿಸಬೇಕು ಎಂದು ಕಿವಿಮಾತು ಹೇಳಿದರು. ಅಖಿಲವಾಗುತ್ತಿದ್ದ ಸನಾತನ ಧರ್ಮವನ್ನು ಉದ್ಧರಿಸಿದವರು ಆಚಾರ್ಯ ಶಂಕರರು. ಅವರು ತೋರಿದ ಮಾರ್ಗದಲ್ಲಿ ನಡೆಯುವುದು ಶ್ರೇಯಸ್ಕರ ಎಂದು ಶ್ರೀಗಳು ಹೇಳಿದರು.