ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನವರಿ 17ರಂದು ನಟಿ ಕಂಗನಾ ರಣಾವತ್ ನಟನೆಯ ‘ಎಮರ್ಜೆನ್ಸಿ’ ಸಿನಿಮಾ ತೆರೆಗೆ ಬರಲಿದೆ. ಈ ಸಿನಿಮಾ 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಹೇರಿದ ತುರ್ತುಪರಿಸ್ಥಿತಿ ಕುರಿತು ಸಿನಿಮಾದಲ್ಲಿ ಹೇಳಲಾಗಿದೆ. ಇದೀಗ ಈ ಚಿತ್ರಕ್ಕೆ ಬ್ಯಾನ್ ಬಿಸಿ ತಟ್ಟಿದೆ.
‘ಎಮರ್ಜೆನ್ಸಿ’ ಸಿನಿಮಾ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲೇ ರಿಲೀಸ್ ಆಗಬೇಕಿತ್ತು. ಆದರೆ, ರಿಲೀಸ್ ವಿಳಂಬ ಆಯಿತು. ಸೆನ್ಸಾರ್ ಮಂಡಳಿಯವರು ಈ ಚಿತ್ರಕ್ಕೆ ಸರ್ಟಿಫಿಕೇಟ್ ನೀಡೋಕೆ ವಿಳಂಬ ಮಾಡಿದರು. ಇದೀಗ ಈ ಚಿತ್ರಕ್ಕೆ ಬಾಂಗ್ಲಾದೇಶದಲ್ಲಿ ಬ್ಯಾನ್ ಬಿಸಿ ತಟ್ಟಿದೆ.
ಬಾಂಗ್ಲಾದೇಶದಲ್ಲಿ ಎಮರ್ಜೆನ್ಸಿ ಸ್ಕ್ರೀನಿಂಗ್ ಅನ್ನು ನಿಲ್ಲಿಸುವ ನಿರ್ಧಾರವು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಪ್ರಸ್ತುತ ಹದಗೆಟ್ಟ ಸಂಬಂಧಗಳಿಗೆ ಸಂಬಂಧಿಸಿದೆ ಎನ್ನಲಾಗಿದೆ. ಅಲ್ಲದೆ, 1975ರಲ್ಲಿ ನಡೆದ ಅಂದಿನ ಬಾಂಗ್ಲಾ ಪ್ರಧಾನಿ ಶೇಖ್ ರೆಹಮಾನ್ ಹತ್ಯೆ ಕುರಿತು ಸಿನಿಮಾದಲ್ಲಿ ತೋರಿಸಲಾಗಿದೆ ಎನ್ನಲಾಗಿದೆ. ಈ ಕಾರಣದಿಂದ ಸಿನಿಮಾಗೆ ಅಲ್ಲಿ ಬ್ಯಾನ್ ಬಿಸಿ ತಟ್ಟಿದೆ.
ಪಾಕಿಸ್ತಾನದಿಂದ ಬಾಂಗ್ಲಾದೇಶವನ್ನು ಬೇರ್ಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಶೇಖ್ ಮುಜಿಬಿರ್ ರೆಹಮಾನ್. ಬಾಂಗ್ಲಾದೇಶದ ಉಗ್ರಗಾಮಿಗಳ ಗುಂಪಿನಿಂದ ಅವರ ಹತ್ಯೆ ಆಗಿದೆ ಎಂದು ಸಿನಿಮಾದಲ್ಲಿ ತೋರಿಸಲಾಗಿದೆ. ಇದು ಬ್ಯಾನ್ ಗೆ ಪ್ರಮುಖ ಕಾರಣ ಆಗಿದೆ.