ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಖಾತೆ ಬದಲಾವಣೆ ಮಾಡಿರುವ ಅಧಿಕಾರಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಂಬುವವರು ಸಚಿವ ರಾಜ್ಯಪಾಲ ಥಾವರ್ ಚಂದ್ ಗೇಹ್ಲೋಟ್ ಅವರ ಬಳಿ ದೂರು ನೀಡಿದ್ದಾರೆ.
ಕಂದಾಯ ಸಚಿವ ಕೃಷ್ಣಭೈರೇಗೌಡ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದು, ಭ್ರಷ್ಟ ಅಧಿಕಾರಗಳ ಮೇಲೆ ಕ್ರಮಜರಿಗಿಸದೇ ಅವರನ್ನು ಬೆಂಬಲಿಸುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಆರೋಪಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲ್ಲೂಕು ಉಪವಿಭಾಗಾಧಿಕಾರಿ ದುರ್ಗಾಶ್ರೀ ಎನ್ ಮತ್ತು ತಹಶಿಲ್ದಾರ್ ವಿಭಾ ವಿಧ್ಯಾ ರಾಠೋಡ್ ಸಾಗುವಳಿದಾರರಿಗೆ ತಾತ್ಕಾಲಿಕವಾಗಿ ಮಂಜೂರಾಗಿದ್ದ ಜಮೀನನ್ನು ಖಾಸಗಿ ಕಂಪನಿಗೆ ಖಾತಾ ಬದಲಾವಣೆ ಮಾಡಿದ್ದಾರೆ ಎಂದು ದಿನೇಶ್ ಆರೋಪಿಸಿದ್ದಾರೆ. ಆದ್ರೆ, ಖಾತಾ ಬದಲಾವಣೆ ಮಾಡಿರುವ ಆರೋಪಿತ ಅಧಿಕಾರಿಗಳಿಗೆ ಸಚಿವರು ರಕ್ಷಣೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲ್ಲೂಕು ಉಪವಿಭಾಗಾಧಿಕಾರಿ ದುರ್ಗಾಶ್ರೀ ಎನ್ ಮತ್ತು ತಹಶಿಲ್ದಾರ್ ವಿಭಾ ವಿಧ್ಯಾ ರಾಠೋಡ್ ಆರೋಪಿತ ಅಧಿಕಾರಿಗಳಾಗಿದ್ದಾರೆ. ಈ ಅಧಿಕಾರಿಗಳ ಮೇಲೆ ದೂರು ಕೊಟ್ಟರೂ ಸಚಿವರು ಕ್ರಮ ತೆಗೆದುಕೊಳ್ತಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಇಬ್ಬರು ಅಧಿಕಾರಿಗಳು ಸೇರಿ 10 ಎಕರೆಗೂ ಅಧಿಕ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ದೊಡ್ಡಬಳ್ಳಾಪುರ ಹುಲುಕಂಟೆ ಗ್ರಾಮದ ಸರ್ವೆನಂಬರ್ 150 ರಲ್ಲಿನ ಸರ್ಕಾರಿ ಜಾಗ, ಸದರಿ ಜಮೀನು ಸಾಗುವಳಿದಾರರಿಗೆ ಹಂಗಾಮಿ ಮಂಜುರಾತಿಯಾಗಿತ್ತು. ಹಂಗಾಮಿ ಮಂಜೂರಾಗಿದ್ದ ಜಾಗ ಖಾಸಗಿಯವರ ಹೆಸರಿಗೆ ಕಾನೂನು ಬಾಹೀರವಾಗಿ ಖಾತಾ ಮಾಡಿರುವ ಆರೋಪವಿದೆ ಎಂದು ದಾಖಲೆ ಸಮೇತ ದೂರು ನೀಡಿದ್ದಾರೆ.