ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಮನೆಗೆ ಮಧ್ಯರಾತ್ರಿ ದರೋಡೆಕೋರರು ನುಗ್ಗಿದ್ದು, ಸಿಕ್ಕ ಸಿಕ್ಕ ಕಡೆ ಚೂರಿಯಿಂದ ಸೈಫ್ ಅಲಿ ಖಾನ್ ಮೇಲೆ ಹಲ್ಲೆ ಮಾಡಿದ್ದಾರೆ.
ಸದ್ಯ ಸೈಫ್ನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಾರೆ ಸೈಫ್ಗೆ ಆರು ಕಡೆ ಇರಿದಿದ್ದು, ಅದರಲ್ಲಿ ಎರಡು ಕಡೆಗೆ ಇರಿದ ಗಾಯದಿಂದ ಗಂಭೀರ ಪರಿಣಾಮ ಉಂಟಾಗಿದೆ.
ಲೀಲಾವತಿ ಆಸ್ಪತ್ರೆಯ ಸಿಒಒ ಡಾ.ನೀರಜ್ ಉತ್ತಮನಿ ಮಾಹಿತಿ ನೀಡಿ, ಸೈಫ್ ಅಲಿ ಖಾನ್ಗೆ ಅಪರಿಚಿತ ವ್ಯಕ್ತಿಗಳು ಚಾಕುವಿನಿಂದ ಇರಿದಿದ್ದಾರೆ. ಅವರನ್ನು ನಮ್ಮ ಆಸ್ಪತ್ರೆಗೆ ರಾತ್ರಿ 3.30ಕ್ಕೆ ಕರೆದುಕೊಂಡು ಬಂದಿದ್ದಾರೆ. ಸೈಫ್ಗೆ ಒಟ್ಟು ಆರು ಗಾಯ, ಅದರಲ್ಲಿ ಎರಡು ಆಳವಾದ ಗಾಯವಾಗಿದೆ. ಒಂದು ಬೆನ್ನು ಹುರಿ ಸಮೀಪ ಚಾಕು ಚುಚ್ಚಲಾಗಿದೆ. ನರಶಸ್ತ್ರ ಚಿಕಿತ್ಸಕ ಡಾ. ನಿತಿನ್, ಕಾಸ್ಮೆಟಿಕ್ ಸರ್ಜನ್ ಡಾ. ಲೀಲಾ ಜೈನ್, ಅರವಳಿಕೆ ತಜ್ಞೆ ಡಾ.ನಿಶಾ ಗಾಂಧಿ ನೇತೃತ್ವದ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ ಎಂದು ತಿಳಿಸಿದ್ದಾರೆ.