ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಸೈಫ್ ಅಲಿ ಖಾನ್ ಮನೆಯ ಮೇಲೆ ದರೋಡೆಕೋರರು ಅಟ್ಯಾಕ್ ಮಾಡಿದ್ದಾರೆ. ಅದನ್ನು ತಪ್ಪಿಸಲು ಪ್ರಯತ್ನಪಟ್ಟ ಸೈಫ್ ಮೇಲೆ ಚಾಕು ಇರಿದಿದ್ದಾರೆ. ಸೈಫ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಇತ್ತ ಮನೆಯಲ್ಲಿದ್ದ ಕರೀನಾ ಕಪೂರ್ ಹಾಗೂ ಮಕ್ಕಳಿಗೆ ಏನಾದ್ರೂ ಹಾನಿಯಾಗಿದ್ಯಾ? ಮಕ್ಕಳನ್ನು ಬೇರೆ ರೂಮ್‌ನಲ್ಲಿ ಮಲಗಿಸಿದ್ದರೂ ಕರೀನಾ ಈ ಅಟ್ಯಾಕ್‌ನಿಂದ ಬಚಾವ್ ಆಗಿದ್ದು ಹೇಗೆ ಎನ್ನುವ ಪ್ರಶ್ನೆ ಎದುರಾಗಿದೆ.
ನಟಿ ಕರೀನಾ ಕಪೂರ್ ಅಟ್ಯಾಕ್ ವೇಳೆ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಕರೀನಾ, ಕರೀಷ್ಮಾ ಹಾಗೂ ಸೋನಂ ಕಪೂರ್ ಕರೀಷ್ಮಾ ಮನೆಯಲ್ಲಿ ಗರ್ಲ್ಸ್ ನೈಟ್ ಎಂದು ಪಾರ್ಟಿ ಮಾಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಕರೀನಾ ಇನ್ಸ್ಟಾಗ್ರಾಮ್ ಸ್ಟೋರಿ ಹಾಕಿದ್ದರು. ಈ ಕಾರಣದಿಂದ ಕರೀನಾ ಬಚಾವ್ ಆಗಿದ್ದಾರೆ.
ಇನ್ನು ಮಕ್ಕಳು ಮನೆಯ ಇನ್ನೊಂದು ಕೋಣೆಯಲ್ಲಿ ಮಲಗಿದ್ದ ಕಾರಣ ಅವರಿಗೆ ಏನೂ ಆಗಿಲ್ಲ ಎಂದು ಹೇಳಲಾಗಿದೆ.