HEALTH | ಶುಗರ್‌ ಪೇಷೆಂಟ್ಸ್‌ ಬೆಲ್ಲ ತಿನ್ನಬಹುದಾ? ತಜ್ಞರು ಈ ಬಗ್ಗೆ ಹೇಳೋದೇನು?

ಎಷ್ಟೋ ಜನರಿಗೆ ಸಕ್ಕರೆ ಒಳ್ಳೆಯದಲ್ಲ ಆದರೆ ಬೆಲ್ಲವನ್ನು ತಿನ್ನಬಹುದು ಎನ್ನುವ ನಂಬಿಕೆ ಇರುತ್ತದೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಬೆಲ್ಲ ಪ್ಯೂರ್‌ ಆಗಿರುವುದಿಲ್ಲ. ಅದರಲ್ಲಿಯೂ ಸಕ್ಕರೆ ಮಿಕ್ಸ್‌ ಇರುವ ಸಾಧ್ಯತೆ ಇದೆ. ಇನ್ನು ಮಧುಮೇಹಿಗಳು ಸಕ್ಕರೆ ಬದಲು ಸ್ವಲ್ಪ ಬೆಲ್ಲ ತಿನ್ನಬಹುದಾ? ಇಲ್ಲಿದೆ ಮಾಹಿತಿ..

ತಜ್ಞರು ಹಾಗೂ ಸಂಶೋಧನೆಯ ಪ್ರಕಾರ, ಬೆಲ್ಲ ತುಂಬಾ ಆರೋಗ್ಯಕರವಾಗಿದೆ. ಆದರೆ, ಮಧುಮೇಹದಲ್ಲಿ ಈ ಸೇವನೆ ಮಾಡೋದು ಒಳ್ಳೆಯದಲ್ಲ. ಬೆಲ್ಲ ಹಾಗೂ ಸಕ್ಕರೆ ಎರಡನ್ನೂ ಕಬ್ಬಿನ ರಸದಿಂದ ತಯಾರಿಸಲಾಗುತ್ತದೆ. ಆದ್ದರಿಂದ ಶುಗರ್​ ಪೇಷಂಟ್​ಗಳಿಗೆ ಬೆಲ್ಲ ಸೇವನೆ ಮಾಡುವುದು ಅಷ್ಟೊಂದು ಸುರಕ್ಷಿತವಲ್ಲ.

ಬೆಲ್ಲ ಸೇವನೆ ಮಾಡುವುದರಿಂದ ಶುಗರ್​ ಲೆವಲ್​ ಇನ್ನೂ ಜಾಸ್ತಿಯಾಗುತ್ತದೆ. ಮಧುಮೇಹ ಇರುವವರು ಸಿಹಿ ಏನನ್ನಾದರೂ ತಿನ್ನಬೇಕೆಂದು ಅನಿಸಿದರೆ, ಬೆಲ್ಲದ ಬದಲು, ಸಿಹಿ ಗೆಣಸಿನಂತಹ ನೈಸರ್ಗಿಕ ಸಿಹಿಕಾರಕಗಳನ್ನು ಬಳಕೆ ಮಾಡಬಹುದು. ಜೊತೆಗೆ ಮಧುಮೇಹ ರೋಗಿಗಳು ಇದನ್ನು ಮಿತವಾಗಿ ಸೇವಿಸುವುದು ಒಳ್ಳೆಯದಲ್ಲ. ಮಧುಮೇಹಿಗಳು ಕುದಿಸಿದ ಸಿಹಿ ಗೆಣಸನ್ನು ಸೀಮಿತ ಪ್ರಮಾಣದಲ್ಲಿ ಸೇವನೆ ಮಾಡಬೇಕು. ಏಕೆಂದರೆ, ಸಿಹಿ ಗೆಣಸಿನ ಗ್ಲೈಸೆಮಿಕ್ ಸೂಚ್ಯಂಕ ತುಂಬಾ ಕಡಿಮೆ ಇದೆ. ಶುಗರ್​ ಪೇಷಂಟ್​ಗಳು ಕಿತ್ತಳೆ, ಆವಕಾಡೊ, ಖರ್ಜೂರ ಕೂಡ ಸೇವಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!