ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬಾಸ್ ಕನ್ನಡ ಸೀಸನ್ 11’ ರಿಯಾಲಿಟಿ ಶೋನ ಫಿನಾಲೆ ನಡೆಯುತ್ತಿದ್ದು, ಉಗ್ರಂ ಮಂಜು ಎಲಿಮಿನೇಟ್ ಆಗಿದ್ದಾರೆ.
ಸಿನಿಮಾದಲ್ಲಿ ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿರುವ ಅವರು ಬಿಗ್ ಬಾಸ್ ಶೋಗೆ ಬಂದ ನಂತರ ಜನಪ್ರಿಯತೆ ಹೆಚ್ಚಾಯಿತು. ಈ ಸೀಸನ್ನಲ್ಲಿ ತುಂಬ ಸ್ಟ್ರಾಂಗ್ ಸ್ಪರ್ಧಿ ಎಂದು ಉಗ್ರಂ ಮಂಜು ಗುರುತಿಸಿಕೊಂಡಿದ್ದರು. ಆರಂಭದಲ್ಲಿ ಅವರ ಆಟ ಚೆನ್ನಾಗಿ ಇತ್ತು. ಆದರೆ ನಂತರದ ದಿನಗಳಲ್ಲಿ ಅವರು ಮಂಕಾದರು.
ಉಗ್ರಂ ಮಂಜು ಅವರಿಗೆ ಬಿಗ್ ಬಾಸ್ ಟ್ರೋಫಿಯ ಅನಿವಾರ್ಯತೆ ಬಹಳ ಇತ್ತು. ಅದನ್ನು ಅವರು ಬಹಳ ಬಾರಿ ಹೇಳಿಕೊಂಡಿದ್ದರು. ಆದರೆ ಟ್ರೋಫಿ ಗೆಲ್ಲುವಲ್ಲಿ ಉಗ್ರಂ ಮಂಜು ವಿಫಲರಾದರು.
ಸಿನಿಮಾಗಳಲ್ಲಿ ವಿಲನ್ ಆಗಿ ಅಬ್ಬರಿಸಿದ ಉಗ್ರಂ ಮಂಜು ಅವರು ರಿಯಲ್ ಲೈಫ್ನಲ್ಲಿ ಸ್ವಲ್ಪ ಎಮೋಷನಲ್ ವ್ಯಕ್ತಿ. ಈ ಶೋನಿಂದ ಅವರ ರಿಯಲ್ ವ್ಯಕ್ತಿತ್ವ ಏನು ಎಂಬುದು ಜನರಿಗೆ ಗೊತ್ತಾಗಿದೆ. ಅವರ ಕುಟುಂಬದ ಬಗ್ಗೆಯೂ ಪ್ರೇಕ್ಷಕರಿಂದ ಗೊತ್ತಾಗಿದೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಅವರಿಗೆ ಸಿನಿಮಾ ಅವಕಾಶಗಳು ಹೆಚ್ಚುವ ನಿರೀಕ್ಷೆ ಇದೆ. ಹಲವು ಪ್ರಾಜೆಕ್ಟ್ಗಳು ಅವರ ಕೈಯಲ್ಲಿ ಇವೆ. ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾದಲ್ಲಿ ಕೂಡ ಉಗ್ರಂ ಮಂಜು ಒಂದು ಮುಖ್ಯವಾದ ಪಾತ್ರ ಮಾಡಿದ್ದಾರೆ.