ಹೇಗೆ ಮಾಡೋದು?
ಮೊದಲು ಪಾಲಕ್ ಸೊಪ್ಪು ಹಾಗೂ ಹಸಿಮೆಣಸನ್ನು ನೀರಿಗೆ ಹಾಕಿ ಬಿಸಿ ಮಾಡಿ
ನಂತರ ಅದನ್ನು ಐಸ್ ನೀರಿಗೆ ಹಾಕಿ ಇಡಿ, ತಣ್ಣಗಾದ ಮೇಲೆ ರುಬ್ಬಿ
ನಂತರ ಟೊಮ್ಯಾಟೋ ಪ್ಯೂರಿ ಮಾಡಿಕೊಳ್ಳಿ, ಈರುಳ್ಳಿಯನ್ನು ಸಣ್ಣದಾಗಿ ಕತ್ತರಿಸಿ ಇಡಿ
ನಂತರ ಬಾಣಲೆಗೆ ಎಣ್ಣೆ ಜೀರಿಗೆ ಚಕ್ಕೆ, ಲವಂಗ ಹಾಗೂ ಪಲಾವ್ ಎಲೆ ಹಾಕಿ
ನಂತರ ಈರುಳ್ಳಿ ಹಾಕಿ ಬಾಡಿಸಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
ಉಪ್ಪು ಹಾಕಿ ಬಾಡಿಸಿ, ಈರುಳ್ಳಿ ಬೆಂದ ನಂತರ ಸ್ವಲ್ಪ ಖಾರದಪುಡಿ, ಗರಂ ಮಸಾಲಾ ಹಾಗೂ ಸಾಂಬಾರ್ ಪುಡಿ ಹಾಕಿ
ನಂತರ ಟೊಮ್ಯಾಟೊ ಪ್ಯೂರಿ ಹಾಕಿ ಬಾಡಿಸಿ, ಎಣ್ಣೆ ಬಿಟ್ಟ ನಂತರ ಪಾಲಕ್ ಪ್ಯೂರಿ ಹಾಕಿ ಬಾಡಿಸಿ
ನಂತರ ನೀರು ಹಾಕಿ ಕುದಿಸಿ, ಹಸಿ ವಾಸನೆ ಹೋದ ನಂತರ ಸಣ್ಣದಾಗಿ ಕತ್ತರಿಸಿದ ಪನೀರ್ ಹಾಕಿ
ಮೇಲೆ ಬೇಕಿದ್ದಲ್ಲಿ ಫ್ರೆಶ್ ಕ್ರೀಮ್ ಹಾಕಿದರೆ ಪಾಲಕ್ ಪನೀರ್ ರೆಡಿ