ಮೇಷ
ಬಿಕ್ಕಟ್ಟು ಉಂಟಾದರೆ ಕ್ಷಿಪ್ರವಾಗಿ ಸ್ಪಂದಿಸಿ. ವಿಳಂಬ ಧೋರಣೆ ಮಾಡದಿರಿ. ಕೆಲವರ ಟೀಕೆ ಎದುರಿಸುವಿರಿ. ಮನಸ್ಸಿಗೆ ಬೇಸರವಾದೀತು.
ವೃಷಭ
ಭಾವನಾತ್ಮಕ ಏರುಪೇರು ಸಂಭವ. ಕೆಲವು ಪ್ರಸಂಗ ಅದಕ್ಕೆ ಕಾರಣ. ನಿಮ್ಮ ನೆಮ್ಮದಿ ಕೆಡಿಸಲು ಕೆಲವರ ಯತ್ನ. ಪ್ರಾಕ್ಟಿಕಲ್ ಆಗಿ ಯೋಚಿಸಿ.
ಮಿಥುನ
ಈ ದಿನ ನಿಮಗೆ ಪೂರಕವೆನಿಸದು. ಎಷ್ಟೇ ಶ್ರಮ ಪಟ್ಟರೂ ಕಾರ್ಯ ಅಪೂರ್ಣ. ಅನಿರೀಕ್ಷಿತ ಅಡ್ಡಿ. ಸಂಬಂಧದಲ್ಲಿ ಬಿರುಕು ಮೂಡಬಹುದು.
ಕಟಕ
ಕಾರ್ಯದಲ್ಲಿ ಪ್ರಗತಿ. ಏನಾದರೂ ಮಹತ್ವದ್ದು ಯೋಜಿಸಿದ್ದರೆ ಕೂಡಲೇ ಜಾರಿ ಮಾಡಿ. ವಿಳಂಬ ಬೇಡ. ಆಪ್ತ ಮುನಿಸು ಎದುರಿಸುವಿರಿ.
ಸಿಂಹ
ವೃತ್ತಿ ಸಂಬಂಽ ಬಿಕ್ಕಟ್ಟಿನಿಂದ ಮಾನಸಿಕ ಒತ್ತಡ. ಧಾರ್ಮಿಕ ಆಸಕ್ತಿ ಈ ಒತ್ತಡ ಶಮನಕ್ಕೆ ನೆರವಾಗಲಿದೆ. ಪ್ರೀತಿಯಲ್ಲಿ ಮಹತ್ವದ ಬೆಳವಣಿಗೆ.
ಕನ್ಯಾ
ಇಷ್ಟಪಡದ ಬೆಳವಣಿಗೆ ಸಂಭವ. ಆದರೆ ಸ್ಥೈರ್ಯ ಕಳಕೊಳ್ಳದಿರಿ. ಹೊಂದಿಕೊಂಡು ನಡೆಯಿರಿ. ಧನಪ್ರಾಪ್ತಿಯಿಂದ ಆರ್ಥಿಕ ನಿವಾರಣೆಯಾಗಲಿದೆ.
ತುಲಾ
ಸಂತೋಷ ಮತ್ತು ಬೇಸರ ಎರಡನ್ನೂ ಇಂದು ಅನುಭವಿಸುವಿರಿ. ಹಿಗ್ಗದೆ ಕುಗ್ಗದೆ ಸಮಭಾವದಿಂದ ವರ್ತಿಸಿ. ಆರೋಗ್ಯಕ್ಕೆ ಗಮನ ಕೊಡಿ.
ವೃಶ್ಚಿಕ
ಮನೆಯವರ ಮಾತಿಗೆ ಸಹನೆಯಿಂದ ಕಿವಿಗೊಡಿ. ಸೌಹಾರ್ದ ವಾತಾವರಣ ಕಾಪಾಡಿ. ವಾಗ್ವಾದದಿಂದ ಲಾಭವಿಲ್ಲ. ಆರ್ಥಿಕ ಒತ್ತಡ ಹೆಚ್ಚು.
ಧನು
ಮನಶ್ಯಾಂತಿ ಕೆಡಿಸುವ ಬೆಳವಣಿಗೆ. ನಿಮ್ಮ ಧೋರಣೆಯಲ್ಲೂ ಹೊಂದಾಣಿಕೆ ಮಾಡಿಕೊಳ್ಳಿ. ನಿಮ್ಮದೇ ಹಠ ಸಾಽಸಬೇಡಿ.
ಮಕರ
ವ್ಯವಹಾರದಲ್ಲಿ ಏನೋ ಕಿರಿಕಿರಿ. ಮಾಡಿದ ಕೆಲಸ ಸರಿಯಾಗಿಲ್ಲ ಎಂಬ ಅಸಂತೃಪ್ತಿ. ಸ್ನೇಹಿತರ ಜತೆ ವಾಗ್ವಾದ ನಡೆದರೂ ಬಳಿಕ ಶಾಂತಿ ಮೂಡಲಿದೆ.
ಕುಂಭ
ನಿಮ್ಮ ನೆಮ್ಮದಿ ಕಳಕೊಳ್ಳುವ ಪ್ರಸಂಗ ಸಂಭವ. ಮನೆಯಲ್ಲಿ ಸಹಕಾರದ ಕೊರತೆ. ಸಿಟ್ಟು ಸೆಡವು ಕಡಿಮೆ ಮಾಡಿಕೊಳ್ಳಿ.
ಮೀನ
ಆರ್ಥಿಕ ಪ್ರಗತಿ. ಅನಿರೀಕ್ಷಿತ ಧನ ಸಂಚಯ. ಕಾಡುವ ಆರೋಗ್ಯ ಸಮಸ್ಯೆ ನಿವಾರಣೆಯಾಗಲಿದೆ. ವ್ಯಕ್ತಿಯೊಬ್ಬರ ವರ್ತನೆ ಕಿರಿಕಿರಿ ತರುವುದು.



