ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಜ್ರಿವಾಲ್ ಮೊದಲ ಬಾರಿಗೆ ದೆಹಲಿಯ ಮುಖ್ಯಮಂತ್ರಿಯಾದಾಗ ನೀಲಿ ಬಣ್ಣದ ವ್ಯಾಗನ್ ಆರ್ ಕಾರಿನಲ್ಲಿ ಬರುತ್ತಿದ್ದರು. ಆದರೆ, ಸಿಎಂ ಆದ ನಂತರ ಶೀಶ್ ಮಹಲ್ ಎಂಬ ಐಷಾರಾಮಿ ಬಂಗಲೆಯಲ್ಲಿ ವಾಸಿಸತೊಡಗಿದರು ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಪತ್ಪರ್‌ಗಂಜ್ ಚುನಾವಣಾ ರ್ಯಾಲಿಯಲ್ಲಿ ಕೇಜ್ರಿವಾಲ್ ವಿರುದ್ಧ ಗುಡುಗಿದ ರಾಹುಲ್ ಗಾಂಧಿ , ಅರವಿಂದ್ ಕೇಜ್ರಿವಾಲ್ ಅವರು ಅಧಿಕಾರಕ್ಕೆ ಬಂದ ಮೇಲೆ ಬೇರೆಯವರಿಗಿಂತಲೂ ವಿಭಿನ್ನವಾಗಿ ರಾಜಕೀಯ ಮಾಡುವುದಾಗಿ ಹೇಳಿದರು. ಮೊದಲು ಸಣ್ಣ ಕಾರಿನಲ್ಲಿ ಬಂದರು. ಆದರೆ, ಶೀಶ್ ಮಹಲ್‌ನಲ್ಲಿ ವಾಸಿಸುತ್ತಿದ್ದರು ಎಂದು ಹೇಳಿದರು.
ದೆಹಲಿ ಹಿಂಸಾಚಾರ ನಡೆದಾಗ ಅರವಿಂದ್ ಕೇಜ್ರಿವಾಲ್ ಎಲ್ಲೂ ಕಾಣಿಸಲಿಲ್ಲ. ಬಡವರಿಗೆ ಅಗತ್ಯವಿದ್ದಾಗ ಮತ್ತು ದೆಹಲಿ ಹಿಂಸಾಚಾರವನ್ನು ಎದುರಿಸಿದಾಗ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಎಂದಿಗೂ ನೋಡಲು ಸಾಧ್ಯವಾಗಲಿಲ್ಲಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಮತ್ತು ಅರವಿಂದ್ ಕೇಜ್ರಿವಾಲ್ ಅವರನ್ನು ಜೈಲಿಗೆ ಹಾಕಿದ ಬಗ್ಗೆ ಪ್ರಸ್ತಾಪಿಸಿದ ರಾಹುಲ್, ಪತ್ಪರ್‌ಗಂಜ್ ಶಾಸಕ ಮನೀಶ್ ಸಿಸೋಡಿಯಾ ಅವರು ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಅಬಕಾರಿ ಹಗರಣದ ರೂವಾರಿ. ಅದಕ್ಕಾಗಿಯೇ ಸಿಸೋಡಿಯಾ ರಾಜೀನಾಮೆ ನೀಡಬೇಕಾಯಿತು ಎಂದು ಟೀಕಿಸಿದ್ದಾರೆ.