ಪ್ರಧಾನಿ ಮೋದಿ ಸಂಕಲ್ಪ ವಜ್ರದಷ್ಟು ಕಠಿಣ: ಮುಖೇಶ್ ಅಂಬಾನಿ ಶ್ಲಾಘನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ಮೋದಿಯವರ ನಾಯಕತ್ವ ‘ಅನುಕರಣೀಯ’ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಮಂಗಳವಾರ ಶ್ಲಾಘಿಸಿದ್ದಾರೆ.

ಪಂಡಿತ್ ದೀನ್ ದಯಾಳ್ ಎನರ್ಜಿ ಯೂನಿವರ್ಸಿಟಿಯ (PDEU) 12ನೇ ಘಟಿಕೋತ್ಸವದಲ್ಲಿ ಮಾತನಾಡಿದ ಮುಖೇಶ್ ಅಂಬಾನಿ, ನಮ್ಮ ಪ್ರೀತಿಯ ಪ್ರಧಾನಿಯಿಂದ ಕಲಿಯಲು ಅನೇಕ ವಿಷಯಗಳಿವೆ. ಪ್ರಧಾನಿ ಮೋದಿ ಎಂದಿಗೂ ಒಳ್ಳೆಯ ವಿಚಾರವನ್ನ ವ್ಯರ್ಥವಾಗಲು ಬಿಡುವುದಿಲ್ಲ. ಅವರ ಮನ್ ಕಿ ಬಾತ್ ಅನಿವಾರ್ಯವಾಗಿ ಅವರ ಮನ್ ಕಾ ಸಂಕಲ್ಪವಾಗುತ್ತದೆ. ಅವರ ಸಂಕಲ್ಪವು ಯಾವಾಗಲೂ ವಜ್ರ ಸಂಕಲ್ಪವಾಗಿದೆ. ಅವರ ದೃಢನಿಶ್ಚಯವು ವಜ್ರದಷ್ಟು ಕಠಿಣವಾಗಿದೆ. ಅವರು ಕೇವಲ ಸಂಕಲ್ಪ ಮಾಡುವ ಮೂಲಕ ವಿಶ್ರಾಂತಿ ಪಡೆಯುವುದಿಲ್ಲ. ಅವರ ಸಂಕಲ್ಪವನ್ನ ಹೇಗೆ ಯಶಸ್ಸಾಗಿ ಪರಿವರ್ತಿಸಬೇಕೆಂದು ಅವರಿಗೆ ತಿಳಿದಿದೆ ಎಂದು ಹೇಳಿದರು.

ಪ್ರಧಾನಿ ಮೋದಿ ಅವರ ಅಪರಿಮಿತ ಶಕ್ತಿಯಿಂದ ಜಗತ್ತು ಕಲಿಯಬೇಕು ಎಂದು ಹೇಳಿದ ಅಂಬಾನಿ, ನರೇಂದ್ರ ಮೋದಿಯವರ ಹೆಸರು ಅನಂತ್ ಶಕ್ತಿ-ಅನಂತ ಶಕ್ತಿಯನ್ನು ಸೂಚಿಸುತ್ತದೆ ಎಂದು ಹೇಳಿದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!