Budget | ಕೇಂದ್ರ ಬಜೆಟ್ ಬೆನ್ನಲ್ಲೇ ಬಂಗಾರದ ಬೆಲೆ ಏರಿಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಆಯವ್ಯಯದ ಲೆಕ್ಕಾಚಾರ ಇಡೀ ದೇಶದಲ್ಲಿ ಸಂಚಲನ ಮೂಡಿಸಿದೆ.
ಇಂದು 2025ನೇ ಸಾಲಿನ ಬಜೆಟ್ ಮಂಡನೆಯಾದರೂ ಘೋಷಣೆಯಾದ ಪ್ರಮುಖವಾದ ನಿರ್ಧಾರಗಳು ಇವತ್ತಿನಿಂದಲೇ ಜಾರಿಗೆ ಬರುವುದಿಲ್ಲ. ಈ ಬಜೆಟ್‌ ಘೋಷಣೆಗಳು 2025 ಏಪ್ರಿಲ್ 1ರಿಂದ ಜಾರಿಗೆ ಬರುತ್ತಿದೆ.

ನಿರ್ಮಲಾ ಸೀತಾರಾಮನ್ ಮಂಡಿಸಿದ 2025ರ ಬಜೆಟ್ ದೇಶದ ಮಾರುಕಟ್ಟೆಯಲ್ಲಿ ಹಲವು ಬದಲಾವಣೆಗೆ ದಾರಿಯಾಗಿದೆ. ಈ ಬಜೆಟ್ ದಿನವೇ ಚಿನ್ನಾಭರಣ ಕೊಳ್ಳುವವರಿಗೆ ಶಾಕಿಂಗ್ ನ್ಯೂಸ್ ಎದುರಾಗಿದ್ದು, ಬಂಗಾರದ ಮೇಲೆ ಸಾರ್ವಕಾಲಿಕ ಏರಿಕೆ ಕಂಡಿದೆ.

ಭಾರತದಲ್ಲಿ ಇಂದು ಚಿನ್ನದ ಬೆಲೆ ಹೊಸ ದಾಖಲೆಯನ್ನು ಬರೆದಿದ್ದು, ದೇಶದಲ್ಲಿ 10 ಗ್ರಾಂ ಚಿನ್ನದ ಮೇಲೆ ಬರೋಬ್ಬರಿ 84,900 ರೂಪಾಯಿ ತಲುಪಿದೆ. ಜಾಗತಿಕ ಮಾರುಕಟ್ಟೆಯ ಬೇಡಿಕೆಯ ಪ್ರಭಾವದಿಂದ ಚಿನ್ನದ ಬೆಲೆ ಗಗನಕ್ಕೆ ಏರಿದೆ. 2025 ವರ್ಷದ ಆರಂಭದಲ್ಲಿ ಚಿನ್ನದ ಬೆಲೆ 79 ಸಾವಿರದ 390 ರೂಪಾಯಿ ಇದ್ದು ಕಳೆದ ಒಂದು ತಿಂಗಳಲ್ಲಿ ಶೇಕಡಾ 7ರಷ್ಟು ಏರಿಕೆ ಕಂಡಿದೆ. ಜನವರಿಯಿಂದ ಇಲ್ಲಿಯವರೆಗೆ ಚಿನ್ನದ ಬೆಲೆ 10 ಗ್ರಾಂಗೆ 5,510 ರೂಪಾಯಿ ಹೆಚ್ಚಳವಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!