Budget | 77 ನಿಮಿಷಗಳಲ್ಲಿ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

2025-26ನೇ ಸಾಲಿನ ಬಜೆಟ್ ಭಾಷಣವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 77 ನಿಮಿಷಗಳಲ್ಲಿ ಓದಿ ಪೂರ್ಣಗೊಳಿಸಿದ್ದಾರೆ.

8 ಬಜೆಟ್‌ಗಳ ಪೈಕಿ, ಕಡಿಮೆ ಅವಧಿಯಲ್ಲಿ ಮಂಡಿಸಿದ ಎರಡನೇ ಬಜೆಟ್ ಭಾಷಣ ಇದಾಗಿದೆ. ಇದಕ್ಕೂ ಮುನ್ನ 2024ರ ಮಧ್ಯಂತರ ಬಜೆಟ್ ಅನ್ನು 56 ನಿಮಿಷಗಳಲ್ಲಿ ಮಂಡಿಸಿದ್ದರು.

ಈ ಬಾರಿ ತೆರಿಗೆ ಕಟ್ಟುವವರಿಗೆ ಭಾರೀ ವಿನಾಯಿತಿಯನ್ನು ನೀಡುವ ಮೂಲಕ ವಿತ್ತ ಸಚಿವೆ ಒಟ್ಟು 1 ಗಂಟೆ 17 ನಿಮಿಷಗಳ ಕಾಲ ಮಂಡಿಸಿದ್ದು, 2024ರ ಪೂರ್ಣ ಪ್ರಮಾಣದ ಬಜೆಟ್‌ನ್ನು ಒಟ್ಟು 1 ಗಂಟೆ 25 ನಿಮಿಷಗಳ ಮಂಡಿಸಿದ್ದರು.

2023ರಲ್ಲಿ 82 ನಿಮಿಷ, 2022ರಲ್ಲಿ 92 ನಿಮಿಷ, 2021ರಲ್ಲಿ ಮೊದಲ ಪೇಪರ್‌ಲೆಸ್ ಬಜೆಟ್‌ನ್ನು ಟ್ಯಾಬ್ಲೆಟ್ ಬಳಸಿಕೊಂಡು 1 ಗಂಟೆ 40 ನಿಮಿಷಗಳ ಕಾಲ ಮಂಡಿಸಿದ್ದರು.

ಇನ್ನೂ 2020ರಲ್ಲಿ 2 ಗಂಟೆ 41 ನಿಮಿಷಗಳ ಕಾಲ ಬಜೆಟ್ ಮಂಡಿಸುವ ಮೂಲಕ ಭಾರತದ ಇತಿಹಾಸದಲ್ಲೇ ಸುದೀರ್ಘ ಬಜೆಟ್ ದಾಖಲೆಯನ್ನು ನಿರ್ಮಿಸಿದ್ದರು.

2019ದಲ್ಲಿ ನಿರ್ಮಲಾ ಸೀತಾರಾಮನ್ ಅವರು ತಮ್ಮ ಮೊದಲ ಬಜೆಟ್ ಮಂಡಿಸಿದ್ದರು. ಈ ಬಜೆಟ್‌ನಲ್ಲಿ ಸೀತಾರಾಮನ್ ಅವರು ಸಾಂದರ್ಭಿಕವಾಗಿ ಹಿಂದಿ, ತಮಿಳು, ಉರ್ದು ಮತ್ತು ಸಂಸ್ಕೃತ ಭಾಷೆ ಬಳಸಿ ಮಂಡಿಸಿದ್ದರು. ಈ ಮೂಲಕ ಭಾರತದ ಮೊದಲ ಪೂರ್ಣಾವಧಿ ಮಹಿಳಾ ಹಣಕಾಸು ಸಚಿವೆಯಾಗಿ ಸೀತಾರಾಮನ್ ಅವರು 2 ಗಂಟೆ 17 ನಿಮಿಷಗಳ ಕಾಲ ಮಂಡಿಸಿದ್ದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!