ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಜಿತ್ ಹೆಗಡೆ ಕನ್ನಡದಲ್ಲಿ ಹಾಡಲು ಹೆಚ್ಚಿನ ಹಣಕ್ಕೆ ಬೇಡಿಕೆ ಇಡುತ್ತಾ ಇದ್ದಾರೆ ಎನ್ನುವ ಮಾತುಗಳು ಕೇಳುತ್ತಿದ್ದು, ಈ ಬಗ್ಗೆ ನಿರ್ಮಾಪಕ ಕೆ. ಮಂಜು ಮಾತನಾಡಿದ್ದಾರೆ.
ಕೆಲವು ಮರಾಠಿ ಗಾಯಕರು ಆಯಾ ಭಾಷೆಗೆ ಕಡಿಮೆ ಸಂಭಾವನೆ ಪಡೆಯುತ್ತಾರೆ. ಸಂಜಿತ್ ಹೆಗಡೆ ಕೂಡ ಹಾಗೆಯೇ ಮಾಡಬೇಕು. ಅವನು ಯಾವುದೇ ಭಾಷೆಯಲ್ಲಿ ಹಾಡಲಿ, ಆದರೆ, ಕನ್ನಡದಲ್ಲಿ ಅವರು ಕಡಿಮೆ ಸಂಭಾವನೆ ಪಡೆಯಬೇಕು. ಗೆಲ್ಲಿಸಿದವರನ್ನು ಮರೆಯಬಾರದು. ಅವರಿಗೆ ಬ್ರೇಕ್ ಕೊಟ್ಟಿದ್ದು ಕನ್ನಡ ಇಂಡಸ್ಟ್ರಿ. ಯಾರೂ ತಮ್ಮ ಬೇರನ್ನು ಮರೆತು ಮುಂದೆ ಹೋಗಬಾರದು ಎಂದು ಹೇಳಿದ್ದಾರೆ.