ಹವಾಮಾನ ಬದಲಾವಣೆ, ಮಣ್ಣು-ಧೂಳಿನ ಕಣ, ಆಹಾರದ ಕಾರಣದಿಂದ ಅಲರ್ಜಿ ಉಂಟಾಗುತ್ತದೆ.
ಅಲರ್ಜಿಯಿಂದ ಬಳಲುವವರು ಹೆಚ್ಚಿನ ನೀರು ಸೇವನೆ ಮಾಡಬೇಕು. ದೇಹದಲ್ಲಿ ಕಡಿಮೆ ನೀರಿದ್ದರೆ ಚರ್ಮದ ಅಲರ್ಜಿ ಹೆಚ್ಚಾಗುತ್ತದೆ.
ಕರ್ಪೂರವನ್ನು ಪುಡಿ ಮಾಡಿ ತೆಂಗಿನ ಎಣ್ಣೆ ಜೊತೆ ಮಿಕ್ಸ್ ಮಾಡಿ ಹಚ್ಚಿ. ಇದು ಉರಿಯನ್ನು ಕಡಿಮೆ ಮಾಡುತ್ತದೆ.
ರಾತ್ರಿ ಕಹಿ ಬೇವಿನ ಎಲೆಗಳನ್ನು ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಅದನ್ನು ರುಬ್ಬಿ ಹಚ್ಚಿಕೊಳ್ಳಿ. ಇದು ಚರ್ಮದ ಅಲರ್ಜಿ ಕಡಿಮೆ ಮಾಡುತ್ತದೆ.