ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಮನಾಥಪುರಂ ಜಿಲ್ಲೆಯ ಮಂಡಪಂನಲ್ಲಿ ಮೀನುಗಾರಿಕೆ ನಡೆಸುತ್ತಿದ್ದ 10 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದ್ದಾರೆ.
ಮಂದಾರ್ ತಗ್ಗು ಪ್ರದೇಶದ ಬಳಿ ಮೀನುಗಾರರನ್ನು ಬಂಧಿಸಿ ವಿಚಾರಣೆಗಾಗಿ ಮನ್ನಾರ್ ನೌಕಾ ನೆಲೆಗೆ ಕರೆದೊಯ್ಯಲಾಗಿದೆ ಎಂದು ಮಂಡಪಂ ಮೀನುಗಾರರ ಸಂಘ ತಿಳಿಸಿದೆ.
ಬಂಧಿತ ಮೀನುಗಾರರನ್ನು ತಂಗಚಿಮಾಡಂನ ಡಿ ಎಫ್ರಾನ್, ಎಸ್ ಡ್ರೋನ್ ಮತ್ತು ಮಂಡಪಂ ಗಾಂಧಿನಗರದ ಪ್ರಸಾದ್, ಮುನಿಯಸ್ವಾಮಿ, ಶಿವ, ಆಂಥೋನಿ, ಪಯಾಸ್, ಸೇಸು ಮತ್ತು ಕೆ ರವಿ ಎಂದು ಗುರುತಿಸಲಾಗಿದೆ. ಅವರಿಂದ ಯಾಂತ್ರೀಕೃತ ದೋಣಿಗಳನ್ನು ಸಹ ವಶಪಡಿಸಿಕೊಂಡಿದ್ದಾರೆ.
ವಿಚಾರಣೆಯ ನಂತರ, ಮೀನುಗಾರರು ಮತ್ತು ಅವರ ದೋಣಿ(IND TN 11 MM 258)ಯನ್ನು ಕಾನೂನು ಕ್ರಮಗಳಿಗಾಗಿ ಶ್ರೀಲಂಕಾ ಮೀನುಗಾರಿಕಾ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.