ಕಿವಿ ಚುಚ್ಚಿಸಲು ಕರೆತಂದಿದ್ದ ಮಗುವಿಗೆ ಅನಸ್ತೇಷಿಯಾ ಓವರ್ ಡೋಸ್: ವೈದ್ಯರ ಎಡವಟ್ಟಿಗೆ ಆರು ತಿಂಗಳ ಹಸುಗೂಸು ಬಲಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ವೈದ್ಯ ಮಾಡಿದ ಎಡವಟ್ಟಿಗೆ 6 ತಿಂಗಳ ಗಂಡು ಮಗು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರದಲ್ಲಿ ನಡೆದಿದೆ.

ಜಿಲ್ಲೆಯ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆ ವೈದ್ಯ 6 ತಿಂಗಳ ಮಗುವಿನ ಪ್ರಾಣವನ್ನು ತೆಗೆದಿದ್ದಾನೆ. ಡಾಕ್ಟರ್ ಮಾಡಿದ ಸಣ್ಣದೊಂದು ಎಡವಟ್ಟಿಗೆ ಬದುಕಿ ಬಾಳಬೇಕಾದ 6 ತಿಂಗಳ ಕಂದನ ಪ್ರಾಣ ಪಕ್ಷಿಯೇ ಹಾರಿ ಹೋಗಿದೆ.

ಮಗುವಿಗೆ ಕಿವಿ ಚುಚ್ಚಿಸಲೆಂದು ಶೆಟ್ಟಹಳ್ಳಿ ಗ್ರಾಮದ ಹತ್ತಿರದಲ್ಲೇ ಇರುವ ಬೊಮ್ಮಲಾಪುರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು. ಆದರೆ ಅಲ್ಲಿನ ವೈದ್ಯರು ಮಗುವಿನ ಎರಡೂ ಕಿವಿಗೆ ಲೋಕಲ್ ಅನಸ್ತೇಷಿಯಾ ಕೊಟ್ಟಿದ್ದಾರೆ.

ಅನಸ್ತೇಷಿಯಾ ನೀಡಿದ ಬಳಿಕ ಮಗುವಿಗೆ ಫಿಟ್ಸ್ ಬಂದು ಮೂರ್ಚೆ ಹೋಗಿದೆ. ತಕ್ಷಣ ಮಗುವನ್ನು ಗುಂಡ್ಲುಪೇಟೆ ತಾಲೋಕು ಆಸ್ಪತ್ರೆಗೆ ರವಾನಿಸಲಾಗಿದೆ.  ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಓವರ್ ಡೋಸ್ ನೀಡಿದರೆಂಬ ಆರೋಪವು ಕೇಳಿ ಬಂದಿದ್ದು ಗುಂಡ್ಲುಪೇಟೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿಯೇ ಮಗು ಅಸುನೀಗಿದೆ.

ಮಗು ಸಾವಿನ ಬಗ್ಗೆ ಪ್ರತಿಕ್ರಿಯಿಸಿರುವ ತಾಲೋಕು ವೈದ್ಯಾಧಿಕಾರಿ ಡಾ. ಅಲೀಂಪಾಶಾ,  ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ಅನಸ್ತೇಷಿಯಾ ಕೊಟ್ಟ ಮೇಲೆ ಪಿಟ್ಸ್ ಬಂದಿದೆ,ತಕ್ಷಣ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ, ಆದರೆ ಆಸ್ಪತ್ರೆಗೆ ಬರುವಷ್ಟರಲ್ಲಿ ಮಗು ಅಸುನೀಗಿದೆ.

ಈ ಬಗ್ಗೆ ಮೆಡಿಕಲ್ ಲೀಗಲ್ ಕೇಸ್ ಮಾಡಿ ಮಗುವಿನ ಸಾವಿಗೆ ನಿಖರ ಕಾರಣ ಏನೆಂಬುದನ್ನು ತನಿಖೆ ಮಾಡಿ  ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುವಯದಾಗಿ ತಿಳಿಸಿದ್ದಾರೆ

ಬೊಮ್ಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮಗುವಿಗೆ  ಚುಚ್ಚಲು 200 ರೂಪಾಯಿ ಹಣವನ್ನು ಸಹ ಪಡೆದಿದ್ದರೂ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.

ನಿಜಕ್ಕೂ ವೈದ್ಯರ ಎಡವಟ್ಟಿನಿಂದ ಮಗು ಅಸುನೀಗಿತಾ  ಇಲ್ಲವಾ ಎಂಬ ಬಗ್ಗೆ  ಮರಣೋತ್ತರ ಪರೀಕ್ಷೆಯಿಂದಷ್ಟೇ ಗೊತ್ತಾಗಬೇಕಿದೆ ಒಟ್ಟಾರೆ   ಪ್ರಖ್ಯಾತನ ತುಂಟಾಟಗಳಿಂದ ಸಂಭ್ರಮ ತುಂಬಿದ್ದ ಮನೆಯುಲ್ಲೀಗ ಸೂತಕದ ಛಾಯೆ ಆವರಿಸಿದೆ.

- Advertisement - Ply

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!