ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಯಾಗರಾಜ್‌ನಲ್ಲಿ ನಡೆಯುವ ಮಹಾ ಕುಂಭ ಮೇಳದಲ್ಲಿ ಭಾಗವಹಿಸಿದ್ದು ಸಂತೋಷವಾಯಿತು. ಸಂಗಮದಲ್ಲಿನ ಸ್ನಾನವು ದೈವಿಕ ಸಂಪರ್ಕದ ಕ್ಷಣವಾಗಿದೆ, ಅದರಲ್ಲಿ ಭಾಗವಹಿಸಿದ ಕೋಟ್ಯಂತರ ಇತರರಂತೆ, ನಾನು ಕೂಡ ಭಕ್ತಿಯ ಮನೋಭಾವದಿಂದ ತುಂಬಿದ್ದೆ. ಗಂಗಾ ಮಾತೆ ಎಲ್ಲರಿಗೂ ಶಾಂತಿ, ಬುದ್ಧಿವಂತಿಕೆ, ಉತ್ತಮ ಆರೋಗ್ಯ ಮತ್ತು ಸಾಮರಸ್ಯವನ್ನು ದಯಪಾಲಿಸಲಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಯಾಗ್ ರಾಜ್ ಮಹಾಕುಂಭ ಮೇಳದ ನಂತರ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾಘ ಮಾಸದ ಅಷ್ಟಮಿ ದಿನವಾದ ಇಂದು ಬುಧವಾರ ಬೆಳಗ್ಗೆ ಮಹಾ ಕುಂಭ ಮೇಳ ನಡೆಯುತ್ತಿರುವ ಪ್ರಯಾಗರಾಜ್‌ನಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ‘ಪವಿತ್ರ ಸ್ನಾನ’ ಮಾಡಿದರು.
ಪ್ರಕಾಶಮಾನವಾದ ಕೇಸರಿ ಜಾಕೆಟ್ ಮತ್ತು ನೀಲಿ ಟ್ರ್ಯಾಕ್‌ಪ್ಯಾಂಟ್ ಧರಿಸಿ, ‘ರುದ್ರಾಕ್ಷಿ’ ಮಣಿಗಳನ್ನು ಹಿಡಿದು, ಮೋದಿಯವರು ನದಿ ನೀರಿನಲ್ಲಿ ಹಲವಾರು ಬಾರಿ ಮಿಂದೆದ್ದು ಸ್ನಾನ ಮಾಡುತ್ತಾ ಪ್ರಾರ್ಥನೆ ಪಠಿಸಿದರು.
ಇಂದು ಪ್ರಯಾಗರಾಜ್ ಮಹಾಕುಂಭದಲ್ಲಿ, ಪವಿತ್ರ ಸಂಗಮದಲ್ಲಿ ಸ್ನಾನ ಮಾಡಿದ ನಂತರ, ನಮಗೆ ಪೂಜೆ ಮಾಡುವ ಪರಮ ಭಾಗ್ಯ ಸಿಕ್ಕಿತು. ಗಂಗಾ ಮಾತೆಯ ಆಶೀರ್ವಾದವನ್ನು ಪಡೆದ ಕಾರಣ, ಮನಸ್ಸಿಗೆ ಅಪಾರ ಶಾಂತಿ ಮತ್ತು ತೃಪ್ತಿ ಸಿಕ್ಕಿದೆ. ಎಲ್ಲಾ ದೇಶವಾಸಿಗಳ ಸಂತೋಷ, ಸಮೃದ್ಧಿ, ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿಕೊಂಡೆನು ಎಂದು ಬರೆದಿದ್ದಾರೆ.