ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಸಭಾ ಅಧಿವೇಶನದಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಕುರಿತು ಚರ್ಚೆಯ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಮಾತನಾಡಿದ್ದಾರೆ.
ಈ ವೇಳೆ ರಾಷ್ಟ್ರಪತಿಯವರ ಭಾಷಣವು ಸ್ಪೂರ್ತಿದಾಯಕ ಮತ್ತು ಪರಿಣಾಮಕಾರಿಯಾಗಿತ್ತು ಎನ್ನುವ ಮೂಲಕ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರಿಗೆ ನೇರವಾಗಿ ಟಾಂಗ್ ಕೊಟ್ಟಿದ್ದಾರೆ.
ರಾಷ್ಟ್ರಪತಿಯವರ ಭಾಷಣವು ಸ್ಪೂರ್ತಿದಾಯಕ ಮತ್ತು ಪರಿಣಾಮಕಾರಿಯಾಗಿತ್ತು, ಮತ್ತು ನಮ್ಮೆಲ್ಲರಿಗೂ ಮುಂದಿನ ಹಾದಿಯನ್ನು ತೋರಿಸಿತು. ಆದರೆ ಕಾಂಗ್ರೆಸ್ ಪಕ್ಷವು ಮೊದಲು ಕುಟುಂಬ ಮಾದರಿಯನ್ನು ಕಠಿಣಗೊಳಿಸಲು ಸಮರ್ಪಿತವಾಗಿದೆ ಎನ್ನುವ ಮೂಲಕ ಸೋನಿಯಾ ಗಾಂಧಿಯವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕುರಿತ ಬಡ ಮಹಿಳೆ ಎಂಬ ಟೀಕೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ನಮ್ಮ ಸರ್ಕಾರದ ಧ್ಯೇಯವಾಕ್ಯ ಯಾವಾಗಲೂ “ರಾಷ್ಟ್ರ ಮೊದಲು” ಎಂದಾಗಿದೆ. ಆದರಿಂದಲೇ ಜನರು ನಮ್ಮ ಅಭಿವೃದ್ಧಿ ಮಾದರಿಯನ್ನು ಗಮನಿಸಿ, ಅರ್ಥಮಾಡಿಕೊಂಡ ಪರಿಣಾಮವಾಗಿ ಚುನಾವಣೆಯಲ್ಲಿ ನಮ್ಮನ್ನು ಬೆಂಬಲಿಸಿದರು. ಇದರ ಪರಿಣಾಮವಾಗಿ ಬಿಜೆಪಿ ಸರ್ಕಾರವು ಐತಿಹಾಸಿಕ ಅವಧಿಗೆ ಅಧಿಕಾರಕ್ಕೆ ಬಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಓಲೈಕೆ ರಾಜಕೀಯವು “ಔಷಧಿ”ಯಂತೆ ಮಾರ್ಪಟ್ಟಿದೆ ಎಂದು ವಾಗ್ದಾಳಿ ನಡೆಸಿ, ಅವರು (ಕಾಂಗ್ರೆಸ್ನವರು) ಸ್ವಾರ್ಥ ರಾಜಕೀಯ, ರಾಷ್ಟ್ರೀಯ ನೀತಿಗಳನ್ನು ಅಭ್ಯಾಸ ಮಾಡಿ ದೊಡ್ಡ ದೊಡ್ಡ ಹಗರಣವನ್ನು ಸೃಷ್ಟಿಸಿದರು. ಇದರಂತೆ ಅವರು, ಸರಿಯಾದ ಕ್ಷಣಕ್ಕಾಗಿ ಕಾಯುತ್ತಿ ಚುನಾವಣೆಗಳು ಬಂದಾಗ ಆ ಸಂದರ್ಭಕ್ಕೆ ಸಂಬಂಧ ಪಟ್ಟಂತ ನಕಲಿ ಭರವಸೆಗಳನ್ನು ನೀಡುತ್ತಾ ರಾಜಕೀಯ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಬಿಜೆಪಿ ಸರ್ಕಾರವು ಸಮಾಜದ ತುಳಿತಕ್ಕೊಳಗಾದ ಜನರ ಬಗ್ಗೆ ಸೂಕ್ಷ್ಮತೆಯನ್ನು ಹೊಂದಿದೆ. ಅದರ ಹಂಗವಾಗಿ ಅಂಗವಿಕಲರು ಮತ್ತು ತೃತೀಯ ಲಿಂಗಿಗಳಿಗಾಗಿ ತಮ್ಮ ಸರ್ಕಾರದ ಉಪಕ್ರಮಗಳನ್ನು ಎತ್ತಿ ತೋರಿಸಿದರು. ಆದರಂತೆ ನೂತನ ಸಂಸತ್ತಿನ ಕಟ್ಟಡದ ನಿರ್ಮಾಣದ ಸಮಯದಲ್ಲಿ ತೆಗೆದುಕೊಂಡ ಮೊದಲ ನಿರ್ಧಾರವು ಮಹಿಳಾ ಸಬಲೀಕರಣವನ್ನು ಗೌರವಿಸುವುದಾಗಿತ್ತು ಎಂದರು.
ಜನರ ಕಲ್ಯಾಣಕ್ಕಾಗಿ ಸಂಪನ್ಮೂಲಗಳ ಅತ್ಯುತ್ತಮ ಬಳಕೆಯನ್ನು ಖಚಿತಪಡಿಸಿಕೊಳ್ಳಲು ತಮ್ಮ ಸರ್ಕಾರ ಯಾವಾಗಲೂ ಪ್ರಯತ್ನಿಸಿದೆ . ಜನರು ಸಂಪನ್ಮೂಲಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ತಮ್ಮ ಸರ್ಕಾರವು ಸ್ಯಾಚುರೇಶನ್ ಮಾದರಿಯನ್ನು ಬಳಸಿದೆ ಎಂದರು.
ಕಳೆದ ದಶಕದಲ್ಲಿ, ನಾವು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಎಂಬ ಕಲ್ಪನೆಯನ್ನು ಸಕಾರಗೊಳಿಸುತ್ತಿದ್ದು, ಜನರು ಇದರ ಪ್ರಯೋಜನಗಳನ್ನು ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದರು.