ಹೊಸ ದಿಗಂತ ವರದಿ, ಅಂಕೋಲಾ:
ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 81ಸಾವಿರ ಮೌಲ್ಯದ ಗೋವಾ ರಾಜ್ಯದಲ್ಲಿ ತಯಾರಾದ ವಿವಿಧ ಬ್ರಾಂಡುಗಳ ಸರಾಯಿ ಬಾಟಲಿಗಳನ್ನು ಅಂಕೋಲಾ ಪೊಲೀಸರು ವಶಪಡಿಸಿಕೊಂಡಿದ್ದು ಆರೋಪಿತರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡವಾಪುರ ನಿವಾಸಿಗಳಾದ ದಿವಾಕರ್. ಇ ಆರ್ ಕೃಷ್ಣಯ್ಯ (33) ಮತ್ತು ಮಾದೇವ ಕೃಷ್ಣಪ್ಪ(40) ಬಂಧಿತ ಆರೋಪಿಯಾಗಿದ್ದು ಆರೋಪಿತರಿಂದ 31080 ರೂಪಾಯಿ ಮೌಲ್ಯದ 750 ಎಂ.ಎಲ್ ನ ರಾಯಲ್ ಸ್ಟಾಗ್ ವಿಸ್ಕಿಯ 30 ಬಾಟಲುಗಳು, 28380 ರೂಪಾಯಿ ಮೌಲ್ಯದ ಮೆನ್ಶನ್ ಹೌಸ್ ಪ್ರೆಂಚ್ ಬ್ರಾಂದಿಯ 84 ಬಾಟಲ್ ಗಳು, 10200 ರೂಪಾಯಿ ಮೌಲ್ಯದ 750 ಎಂ.ಎಲ್ ಇಂಪೀರಿಯಲ್ ಬ್ಲೂ ವಿಸ್ಕಿಯ 30 ಬಾಟಲ್ ಗಳು,3740 ರೂಪಾಯಿ ಮೌಲ್ಯದ 750 ಎಂ.ಎಲ್ ನ ಮೆಕ್ ಡವಲ್ ನಂ 1 ರಿಸರ್ವ್ ವಿಸ್ಕಿಯ 11 ಬಾಟಲ್ ಗಳು, 5760 ರೂಪಾಯಿ ಮೌಲ್ಯದ 180 ಎಂ.ಎಲ್ ಮೆನ್ಶನ್ ಹೌಸ್ ಬ್ರಾಂದಿಯ 72 ಬಾಟಲ್ ಗಳು, 920 ರೂಪಾಯಿ ಮೌಲ್ಯದ 2 ಲೀಟರ್ ನ ರಾಯಲ್ ಸ್ಟಾಗ್ ವಿಸ್ಮಯ 1 ಬಾಟಲ್, 825 ರೂಪಾಯಿ ಮೌಲ್ಯದ ಮೆನ್ಶನ್ ಹೌಸ್ 1 ಲೀಟರ್ ಹೀಗೆ ಒಟ್ಟು 80905 ರೂಪಾಯಿ ಮೌಲ್ಯದ ಗೋವಾ ಸರಾಯಿ ವಶಪಡಿಸಿಕೊಳ್ಳಲಾಗಿದೆ.
ಆರೋಪಿತರು ಕೆ.ಎ 42 ಎಂ 2190 ನೋಂದಣಿ ಸಂಖ್ಯೆಯ ಸ್ವಿಪ್ಟ್ ಕಾರಿನಲ್ಲಿ ಗೋವಾ ಸರಾಯಿ ಸಾಗಿಸುತ್ತಿದ್ದ ಸಂದರ್ಭದಲ್ಲಿ ಬೆಲೇಕೇರಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ಅಂಕೋಲಾ ಪೊಲೀಸರು ಸರಾಯಿ ಸಾಗಟ ಪತ್ತೆ ಹಚ್ಚಿದ್ದು ಆರೋಪಿತರ ಮೇಲೆ ಕರ್ನಾಟಕ ಅಬಕಾರಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲು ಕ್ರಮಗಳನ್ನು ಕೈಗೊಂಡಿದ್ದಾರೆ.