27 ವರ್ಷಗಳ ನಂತರ ದೆಹಲಿಯಲ್ಲಿ ಮತ್ತೆ ಅರಳಲಿದೆ ಕಮಲ: ಇದು ಆ್ಯಕ್ಸಿಸ್ ಮೈ ಇಂಡಿಯಾ ಭವಿಷ್ಯ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಮತದಾನ ನಡೆದಿದ್ದು, ಇನ್ನೇನು ಕೇವಲ ಒಂದೇ ದಿನದಲ್ಲಿ ಆಳುವವರು ಯಾರು ಅಂತ ತಿಳಿಯಲಿದೆ.

ಇತ್ತ ಮತ್ತೊಮ್ಮೆ ಅಧಿಕಾರದ ಗೆದ್ದುಗೆ ಏರುವ ಕನಸಿನಲ್ಲಿದ್ದ ಆಮ್‌ ಆದ್ಮಿ ಪಕ್ಷಕ್ಕೆ (AAP) ಹ್ಯಾಟ್ರಿಕ್‌ ಗೆಲುವ ಸಿಗುತ್ತಾ? ಇಲ್ಲ ಈ ಬಾರಿಯಾದ್ರೂ ಬಿಜೆಪಿ (BJP) ಅಧಿಕಾರಕ್ಕೆ ಬರುತ್ತಾ? ಇದಕ್ಕೆ ಎಕ್ಸಿಟ್‌ ಪೋಲ್‌‌ನಲ್ಲಿದೆ ಉತ್ತರ ಸಿಕ್ಕಿದ್ದು, ಬಹುತೇಕರು ನಿನ್ನೆಯೇ ಎಕ್ಸಿಟ್‌ ಪೋಲ್‌ ಅನೌನ್ಸ್ ಮಾಡಿದ್ದರು. ಆದರೆ ಇಂದು ಆ್ಯಕ್ಸಿಸ್ ಮೈ ಇಂಡಿಯಾ ಎಕ್ಸಿಟ್‌ ಪೋಲ್‌ ಅನೌನ್ಸ್ ಮಾಡಿದೆ. ಇದರಲ್ಲಿ ಈ ಬಾರಿ ಬಿಜೆಪಿ ದೆಹಲಿ ಗದ್ದುಗೆ ಏರಲಿದೆ ಎಂದು ಹೇಳಿದೆ.

ಆ್ಯಕ್ಸಿಸ್‌ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ದೆಹಲಿಯಲ್ಲಿ ಈ ಬಾರಿ ಬಿಜೆಪಿ 45 ರಿಂದ 55 ಕ್ಷೇತ್ರಗಳಲ್ಲಿ ದಿಗ್ವಿಜಯ ಸಾಧಿಸಲಿದೆ ಎಂದು ಹೇಳಿದೆ. ಇನ್ನೂ ಆಪ್ ಪಕ್ಷ ಕೇವಲ 15 ರಿಂದ 25 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಲಿದೆ ಎಂದು ಹೇಳಿದೆ. ಕಾಂಗ್ರೆಸ್‌ ಈ ಬಾರಿ ಖಾತೆ ತೆರೆಯುವ ನಿರೀಕ್ಷೆಯಲ್ಲಿದೆಯಂತೆ. ಇನ್ನೂ ಇತರೆ 3 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಈ ಸಮೀಕ್ಷೆ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!