ಹೊಸದಿಗಂತ ಡಿಜಿಟಲ್ ಡೆಸ್ಕ್
ತಮಿಳು ನಟ ಅಜಿತ್ ಕುಮಾರ್ ಕಾರು ರೇಸ್ ಅಂದರೆ ಬಲು ಇಷ್ಟ. ಆದರೆ ದುಬೈನಲ್ಲಿ ಅಂದು ಅಜಿತ್ ಕಾರು ಅಪಘಾತಗೊಂಡು ಆತಂಕ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಇದೀಗ ಪೋರ್ಚುಗಲ್ ರೇಸ್‌ನಲ್ಲಿ ಅಜಿತ್ ಕಾರು ಅಪಘಾತಕ್ಕೀಡಾಗಿದೆ.
ದುಬೈ ರೇಸ್‌ನಲ್ಲಿ ಅಜಿತ್ 3ನೇ ಸ್ಥಾನ ಪಡೆದು ಸಾಧನೆ ಮಾಡಿದರು. ದುಬೈ ಕಾರ್ ರೇಸ್ ನಂತರ ಪೋರ್ಚುಗಲ್‌ನಲ್ಲಿ ನಡೆಯುತ್ತಿರುವ ಕಾರ್ ರೇಸ್‌ನಲ್ಲಿ ಭಾಗವಹಿಸಿದ್ದರು. ಇದರಲ್ಲಿ ಅನಿರೀಕ್ಷಿತವಾಗಿ ಕಾರ್ ಅಪಘಾತಕ್ಕೀಡಾಗಿದೆ. ಅಭ್ಯಾಸದ ವೇಳೆ ಅಜಿತ್ ಡ್ರೈವ್ ಮಾಡುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಈ ಆಕ್ಸಿಡೆಂಟ್‌ನಲ್ಲಿ ಅಜಿತ್‌ಗೆ ಯಾವುದೇ ಗಾಯಗಳಾಗಿಲ್ಲ. ಆದರೆ ಅವರ ಕಾರ್ ಮಾತ್ರ ಸಂಪೂರ್ಣವಾಗಿ ಜಖಂಗೊಂಡಿದೆ.
ಕಾರಿನ ಬ್ರೇಕ್ ವಿಫಲಗೊಂಡ ಕಾರಣ ಅಪಘಾತಗೊಂಡಿದೆ. ಆಕ್ಸಿಡೆಂಟ್ ನಂತರ ಮಾತನಾಡಿದ ಅಜಿತ್, ‘ನಾವು ಖುಷಿಯಾಗಿದ್ದೇವೆ. ಸಣ್ಣ ಆಕ್ಸಿಡೆಂಟ್ ಆದರೂ ನಮಗೆ ಏನೂ ಆಗಿಲ್ಲ. ಕಾರ್ ರೇಸ್‌ನಲ್ಲಿ ಗೆಲ್ಲುತ್ತೇವೆ. ನಮಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು’ ಎಂದಿದ್ದಾರೆ.