ಮಹಾರಾಷ್ಟ್ರ ಮಾಜಿ ಸಚಿವನ ಮಗ ರಿತುರಾಜ್ ತಾನಾಜಿ ಕಿಡ್ನ್ಯಾಪ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರ ಸರ್ಕಾರದ ಮಾಜಿ ಆರೋಗ್ಯ ಸಚಿವ ಮತ್ತು ಶಿವಸೇನಾ ಶಾಸಕ ತಾನಾಜಿ ಸಾವಂತ್ ಅವರ ಪುತ್ರ ರಿತುರಾಜ್ ತಾನಾಜಿ ಸಾವಂತ್ ಅವರನ್ನು ಅಪಹರಿಸಿದ ಘಟನೆ ನಡೆದಿದೆ.

ಇಂದುಸಂಜೆ 5 ಗಂಟೆಗೆ, ಅಪಹರಣಕಾರರು ಕಾರಿನಲ್ಲಿ ಬಂದು ರಿತುರಾಜ್‌ನನ್ನು ಅಪಹರಿಸಿದ್ದಾರೆ.

ರಾಷ್ಟ್ರೀಯ ಮಾಧ್ಯಮವೊಂದರ ವರದಿಯ ಪ್ರಕಾರ, ಅಪಹರಣ ಪ್ರಕರಣ ಸಂಬಂಧ ಪುಣೆಯ ಸಿಂಹಗಡ್ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ.

ಪುಣೆಯ ನರ್ಹೆ ಪ್ರದೇಶದಿಂದ ತಾನಾಜಿ ಸಾವಂತ್ ಅವರ ಮಗ ನಾಪತ್ತೆಯಾಗಿರುವ ಸುದ್ದಿ ಇದೆ. ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸಚಿವರ ಮಗ ಕೌಟುಂಬಿಕ ಸಮಸ್ಯೆಯಿಂದ ಮನನೊಂದು ಮನೆ ಬಿಟ್ಟು ಹೋಗಿದ್ದಾರೆ ಎಂಬ ಮಾತೂ ಕೇಳಿಬರುತ್ತಿದೆ, ಆದರೆ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here