ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೂಪರ್ಸ್ಟಾರ್ ರಜನಿಕಾಂತ್ ಅವರ ಚಿತ್ರಗಳನ್ನು ಜನರು ಸಾಕಷ್ಟು ಇಷ್ಟಪಡುತ್ತಾರೆ. ಅದರಲ್ಲೂ ಅವರ ಸ್ಲೋ ಮೋಷನ್ ದೃಶ್ಯಗಳನ್ನು ಜನರು ಹುಚ್ಚೆದ್ದು ನೋಡುತ್ತಾರೆ. ಈಗ ಇದರ ಬಗ್ಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿಕೆ ಒಂದನ್ನು ನೀಡಿದ್ದಾರೆ.
‘ನಟನೆ ಅನ್ನೋದು ಪಾತ್ರದ ಬಗ್ಗೆ ಆದರೆ, ಸ್ಟಾರ್ಗಿರಿ ಅನ್ನೋದು ಪರ್ಫಾರ್ಮೆನ್ಸ್ ಮೇಲೆ ಆಧರಿಸಿರುತ್ತದೆ. ಇದರ ಮಧ್ಯೆ ಸಾಕಷ್ಟು ವ್ಯತ್ಯಾಸ ಇದೆ. ರಜನಿಕಾಂತ್ ಓರ್ವ ಉತ್ತಮ ನಟನೇ? ಅದು ನಂಗೆ ಗೊತ್ತಿಲ್ಲ. ರಜನಿಕಾಂತ್ ಎಲ್ಲ ರೀತಿಯ ಪಾತ್ರಗಳನ್ನು ಮಾಡುತ್ತಾರೆ ಎಂದು ನನಗೆ ಅನಿಸದು. ಸ್ಲೋ ಮೋಷನ್ ಇಲ್ಲದೆ ರಜನಿಕಾಂತ್ ಇಲ್ಲ’ ಎಂದು ರಾಮ್ ಗೋಪಾಲ್ ವರ್ಮಾ ಪಾಸಿಟಿವ್ ಆಗಿಯೇ ಹೇಳಿಕೆ ನೀಡಿದ್ದಾರೆ.