FOOD| ನೀವು ವೆಜಿಟೇರಿಯಾನಾ? ನಿಮಗೂ ನೋನ್ ವೆಜ್ ಟೆಸ್ಟ್ ಬೇಕಾ ? ಹಾಗಾದ್ರೆ ಈ ಸೋಯಾ ಚಾಪ್ ಟ್ರೈ ಮಾಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೋಯಾ ಚಾಪ್ಅನ್ನ ಸಸ್ಯಹಾರಿಗಳ ಮಾಂಸ ಎಂದು ಕರೆದ್ರು ತಪ್ಪಾಗಲ್ಲ. ಮಾಂಸದಂತೆ ರುಚಿಕೊಡೋ ಈ ಸೋಯಾ ಚಾಪ್ ವಿಶೇಷವಾಗಿ ನಾರ್ತ್ ಇಂಡಿಯಾದ ಆಹಾರ ಶೈಲಿಯಲ್ಲಿ ಕಾಣಬಹುದು.

ಇಂದಿನ ರೆಸಿಪಿಯಲ್ಲಿ, ಸರಳ ಮತ್ತು ರುಚಿಕರವಾದ ಸೋಯಾ ಚಾಪ್ ಫ್ರೈ ಮಾಡುವುದು ಹೇಗೆ ಅಂತ ನೋಡೋಣ.

ಬೇಕಾಗುವ ಪದಾರ್ಥಗಳು:

4-5 ಸೋಯಾ ಚಾಪ್ ಸ್ಟಿಕ್ಕ್
1 ಕಪ್ ಮೊಸರು
1 ಟೀ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
1 ಟೀ ಸ್ಪೂನ್ ಮೆಣಸಿನ ಪುಡಿ
1/2 ಟೀ ಸ್ಪೂನ್ ಹಳದಿ ಪುಡಿ
1 ಟೀ ಸ್ಪೂನ್ ಧನಿಯಾ ಪುಡಿ
1/2 ಟೀ ಸ್ಪೂನ್ ಜೀರಿಗೆ ಪುಡಿ
1 ಟೀ ಸ್ಪೂನ್ ಗರಂ ಮಸಾಲಾ
ಉಪ್ಪು ರುಚಿಗೆ ತಕ್ಕಷ್ಟು
1 ಟೀ ಸ್ಪೂನ್ ಲೆಮನ್ ಜ್ಯೂಸ್
2 ಟೇಬಲ್ ಸ್ಪೂನ್ ಬೆಣ್ಣೆ/ತೆಂಗಿನೆಣ್ಣೆ
೨ ಹಸಿಮೆಣಸು
ಕೊತ್ತಂಬರಿ ಸೊಪ್ಪು ಸ್ವಲ್ಪ

ತಯಾರಿಸುವ ವಿಧಾನ:

ಸೋಯಾ ಚಾಪ್‌ಗಳನ್ನು ಬಿಸಿ ನೀರಿನಲ್ಲಿ 10 ನಿಮಿಷ ನೆನೆಸಿಡಿ. ನಂತರ ಸೋಯಾ ಚಾಪ್‌ ಸ್ಟಿಕ್ಕ್ ತೆಗೆದು ಸೈಡ್ ನಲ್ಲಿ ಇಡಿ. ಈಗ ಇನ್ನೊಂದು ಬೌಲ್ ಗೆ ಮೊಸರು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮಸಾಲೆ ಪುಡಿಗಳು, ಉಪ್ಪು ಮತ್ತು ಲೆಮನ್ ಜ್ಯೂಸ್ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣಕ್ಕೆ ಸೋಯಾ ಚಾಪ್‌ ಹಾಕಿ ಮ್ಯಾರಿನೇಟ್ ಮಾಡಿ 30 ನಿಮಿಷ ಬಿಡಿ.

ಈಗ ಒಂದು ಫ್ರೈಯಿಂಗ್ ಪ್ಯಾನ್ ನಲ್ಲಿ ಬೆಣ್ಣೆ ಅಥವಾ ತೆಂಗಿನೆಣ್ಣೆ ಬಿಸಿ ಮಾಡಿ ಅದಕ್ಕೆ ಮೆರಿನೇಟ್ ಮಾಡಿದ ಚಾಪ್ ಹಾಕಿ ಗೋಲ್ಡನ್ ಬ್ರೌನ್ ಬಣ್ಣ ಬರೋವರೆಗೆ ಫ್ರೈ ಮಾಡಿ. ಕೊನೆಗೆ ಹಸಿಮೆಣಸು ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಬಿಸಿ ಬಿಸಿ ಸರ್ವ್ ಮಾಡಿ.

ಈ ಸೋಯಾ ಚಾಪ್ ಜೊತೆ ಗ್ರೀನ್ ಚಟ್ನಿ ಅಥವಾ ಪುದಿನಾ ದಹಿ ಡಿಪ್ ಜೊತೆಗೆ ಸೇವಿಸಿದರೆ ಇನ್ನಷ್ಟು ರುಚಿಯಾಗಿರುತ್ತೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!