ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿಗೆ ಕಾರ್ಯಕ್ರ್ರಮವೊಂದರಲ್ಲಿ ಮಹಿಳಾ ಅಭಿಮಾನಿಯೊಬ್ಬರನ್ನು ಚುಂಬಿಸುತ್ತಿರುವ ಖ್ಯಾತ ಹಿನ್ನೆಲೆ ಗಾಯಕ ಉದಿತ್ ನಾರಾಯಣ್ ಅವ್ರ ವಿಡಿಯೋ ವೈರಲ್ ಆದ ನಂತ್ರ ಈಗ ಅವರ
ಪತ್ನಿಯಿಂದಾಗಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಮೊದಲ ಪತ್ನಿ ರಂಜನಾ ಝಾ ಅವ್ರ ಆಸ್ತಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಅಂತ ಆರೋಪಿಸಿ ಉದಿತ್ ನಾರಾಯಣ್ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.
1984 ರಂದು ಉದಿತ್ ಮತ್ತು ರಂಜನಾ ವಿವಾಹವಾಗಿದ್ದರು. 1988 ರಲ್ಲಿ ಅವರು ಗಾಯನದ ಯಶಸ್ಸಿನ ತುತ್ತತುದಿಯಲ್ಲಿದ್ದಾಗ, ರಂಜನಾ ಝಾ ಅವರಿಂದ ದೂರವಾಗಿದ್ದರು. 2006 ರಲ್ಲಿ ಈ ವಿವಾದಗಳು ಹೆಚ್ಚು ಚರ್ಚೆಗೊಂಡು ರಂಜನಾ ಝಾ ಮಹಿಳಾ ಆಯೋಗವನ್ನು ಸಂಪರ್ಕಿಸಿ ತಮಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿದ್ದರು.
ಮುಂದೆ ಈ ಪ್ರಕರಣದಲ್ಲಿ ಉದಿತ್ ನಾರಾಯಣ್ ರಂಜನಾ ಅವರಿಗೆ ಆರ್ಥಿಕ ಸಹಾಯ ಕೊಡುವುದಾಗಿ ಭರವಸೆ ನೀಡಿದ್ದರು, ಆದ್ರೆ ಅವರು ಅದನ್ನು ಪೂರೈಸಲು ಅವ್ರಿಗೆ ಸಾಧ್ಯ ಆಗಿರಲಿಲ್ಲ.
ಇದು ಈಗ ಫ್ಯಾಮಿಲಿ ಕೋರ್ಟ್ ನಲ್ಲಿ ಹೊಸ ಪ್ರಕರಣವನ್ನು ದಾಖಲಿಸೋದಕ್ಕೆ ಕಾರಣವಾಗಿದೆ. ರಂಜನಾ ಝಾ ಅವರ ಲೀಗಲ್ ರೆಪ್ರೆಸೆಂಟಿವ್ ಅಜಯ್ ಕುಮಾರ್, ತಮ್ಮ ಲಿಖಿತ ಪ್ರತಿಯಲ್ಲಿ, ಉದಿತ್ ನಾರಾಯಣ್ ರಂಜನಾ ಝಾ ಅವ್ರ ಹಣವನ್ನ ಸುಲಿಗೆ ಮಾಡಿದ್ದಾರೆ ಹಾಗೂ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿಯನ್ನು ನೀಡಿದ್ದಾರೆ ಅಂತ ಆರೋಪಿಸಿದ್ದಾರೆ.
ಈ ಮಧ್ಯೆ ಮಾನವ ಹಕ್ಕುಗಳ ವಕೀಲ ಎಸ್.ಕೆ. ಝಾ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಮತ್ತು ಬಿಹಾರ ಮಾನವ ಹಕ್ಕುಗಳ ಆಯೋಗ (BHRC) ಕ್ಕೆ ಅರ್ಜಿ ನೀಡಿ ವಿಷಯವನ್ನ ಉಲ್ಬಣಗೊಳಿಸಿದ್ದಾರೆ.
ಭಾರತೀಯ ಸಂವಿಧಾನ ಮತ್ತು ಹಿಂದೂ ವಿವಾಹ ಕಾಯ್ದೆಯಡಿಯಲ್ಲಿ, ಮೊದಲ ಮದುವೆಯನ್ನು ಕಾನೂನುಬದ್ಧವಾಗಿ ಡೈವೋರ್ಸ್ ತೆಗೆದುಕೊಳ್ಳದೆ ಮತ್ತೆ ಮದುವೆಯಾಗುವುದು ಕಾನೂನುಬಾಹಿರ. ಉದಿತ್ ನಾರಾಯಣ್ ಅವರ ಈ ರೀತಿಯ ನಡವಳಿಕೆಯಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಅಂತ ಎಸ್.ಕೆ. ಝಾ ವಾದಿಸಿದ್ದಾರೆ.