CINE | ಬಿಡುಗಡೆಗೂ ಮುನ್ನವೇ ಕುಬೇರ ಸಿನಿಮಾಗೆ ಸಂಕಷ್ಟ, ಹೆಸರು ಕದ್ದಿರುವ ಆರೋಪ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಾಗಾರ್ಜುನ, ರಶ್ಮಿಕಾ ಮಂದಣ್ಣ ಹಾಗೂ ಧನುಷ್‌ ನಟನೆಯ ಕುಬೇರ ಸಿನಿಮಾ ರಿಲೀಸ್‌ಗೂ ಮುನ್ನವೇ ಸಮಸ್ಯೆ ಎದುರಿಸುತ್ತಿದೆ. ನಿರ್ಮಾಪಕರೊಬ್ಬರು ಸಿನಿಮಾ ಟೈಟಲ್‌ ನಮ್ಮದು, ನಾನು ವರ್ಷಗಳ ಹಿಂದೆಯೇ ರಿಜಿಸ್ಟರ್‌ ಮಾಡಿಸಿದ್ದೆ ಎಂದು ಹೇಳಿದ್ದಾರೆ.

ಕರಿಮಾಕೊಂಡ ನರೇಂದ್ರನ್ ಎಂಬುವರು, ‘ಕುಬೇರ’ ಟೈಟಲ್ ತಮ್ಮ ಬಳಿ ಇದೆ ಎಂದಿದ್ದು, ಟೈಟಲ್ ಅನ್ನು ತಾವು ತೆಲುಗು ಸಿನಿಮಾ ಛೇಂಬರ್​ನಲ್ಲಿ 2023 ರಲ್ಲಿಯೇ ಹೆಸರು ನೊಂದಾವಣಿ ಮಾಡಿಸಿರುವುದಾಗಿ ಹೇಳಿದ್ದಾರೆ.
ಟೈಟಲ್ ರಿಜಿಸ್ಟರ್ ಮಾಡಿರುವುದು ಮಾತ್ರವೇ ಅಲ್ಲದೆ ಸಿನಿಮಾದ ಅರ್ಧ ಭಾಗ ಚಿತ್ರೀಕರಣ ಸಹ ಮಾಡಿದ್ದೇವೆ ಎಂದಿದ್ದಾರೆ.

ನಿರ್ದೇಶಕ ಶೇಖರ್ ಕಮ್ಮುಲ, ತಮ್ಮ ಸಿನಿಮಾ ಟೈಟಲ್ ಅನ್ನು ಕದ್ದಿದ್ದಾರೆ ಎಂದು ಆರೋಪ ಮಾಡಿರುವ ಕರಿಮಾಕೊಂಡ ನರೇಂದ್ರನ್, ಕಮ್ಮುಲ ಅವರು ತಮ್ಮ ಸಿನಿಮಾದ ಹೆಸರು ಬದಲಾವಣೆ ಮಾಡಬೇಕು ಇಲ್ಲವಾದರೆ ತಮಗೆ ಆಗಿರುವ ನಷ್ಟವನ್ನು ತುಂಬಿಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಅಲ್ಲದೆ ತೆಲುಗು ಫಿಲಂ ಚೇಂಬರ್ ಮಧ್ಯ ಪ್ರವೇಶಿಸಬೇಕು ಎಂದು ಮನವಿ ಸಹ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!