ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ-ಜೆಡಿಎಸ್ ಶಾಸಕರು ಸಚಿವ ಜಮೀರ್ ಅವರ ಸಂಪರ್ಕದಲ್ಲಿದ್ದರೆ ಕರೆದುಕೊಂಡು ಹೋಗಲಿ ನೋಡೋಣ ಎಂದು ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಸವಾಲು ಹಾಕಿದ್ದಾರೆ.
ಜಮೀರ್ ನಿನ್ನ ಸಂಪರ್ಕದಲ್ಲಿದ್ದರೆ ಏನ್ ಬೇಕಾದ್ರು ಮಾಡಪ್ಪ.. ನಿನಗೆ ಅಡ್ಡ ಬಂದವರು ಯಾರಪ್ಪ..? ತಾಕತ್ತಿದ್ದರೇ ಮಾಡಿ ತೋರಿಸಪ್ಪ. ಬಿಜೆಪಿ-ಜೆಡಿಎಸ್ ಶಾಸಕರು ಇದ್ದರೆ ಅದೇನು ಮಾಡ್ತಾರೋ ಮಾಡಿ ತೋರಿಸಲಿ ಎಂದು ಟೀಕಿಸಿದ್ದಾರೆ.