ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಡಿಗೆ ಮನೆಗಳ ಬೋರ್ಡ್‌ನಲ್ಲಿ ಮನೆ ಖಾಲಿಯಿದೆ ಬರೀ ಸಸ್ಯಹಾರಿಗಳಿಗೆ ಮಾತ್ರ ಎಂದು ಬರೆದಿರುವುದನ್ನು ನೀವು ನೋಡಿರುತ್ತೀರಿ. ಆದರೆ ಸೈಟ್ ಮಾರಾಟಕ್ಕಿದೆ ಬಟ್ ಸಸ್ಯಹಾರಿಗಳಿಗೆ ಮಾತ್ರ ಎನ್ನುವ ಬೋರ್ಡ್ ನೋಡಿದ್ದೀರಾ?
ಈ ವಿಚಿತ್ರ ಜಾಹೀರಾತು ಫಲಕವನ್ನು ಕಂಡು ಇರ್ಲಿ ನಿಮ್ಗೆಲ್ಲಾ ಎಲ್ಲಾ ಆಹಾರವನ್ನು ತಿನ್ನುವ ಹಕ್ಕಿರುವಂತೆ, ಅವರಿಗೆ ತಮ್ಮಿಷ್ಟದವರಿಗೆ ಜಾಗ ಮಾರುವ ಹಕ್ಕಿದೆ ಎಂದು ಇದರ ಪರವಾಗಿ ಮಾತನಾಡಿದರೆ ಇನ್ನೂ ಕೆಲವರು ಜನ ಹಿಂಗೂ ಇರ್ತಾರಾ ಎಂದು ಹೇಳಿದ್ದಾರೆ.ಅಬಿ ಒಕ್ಕಲಿಗ ಎಂಬವರು ಈ ಕುರಿತ ಫೋಟೋವನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆಗುತ್ತಿರುವ ಫೋಟೋದಲ್ಲಿ “ಸೈಟ್ ಮಾರಾಟಕ್ಕಿದೆ, ಕೇವಲ ಸಸ್ಯಹಾರಿಗಳಿಗೆ ಮಾತ್ರ” ಎಂದು ಜಾಹೀರಾತು ನೀಡಿರುವ ದೃಶ್ಯವನ್ನು ಕಾಣಬಹುದು.
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್ 2 ಸಾವಿರಕ್ಕೂ ಹೆಚ್ಚು ಲೈಕ್ಸ್ ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು “ಜಾತಿ ಹೆಸರಲ್ಲಿ ಕಲ್ಯಾಣ ಮಂಟಪ, ಸಮುದಾಯ ಭವನ ಕಟ್ಟುತ್ತಾರಂತೆ ಹಾಗಿರುವಾಗ ಇದ್ರಲ್ಲೇನೂ ತಪ್ಪಿಲ್ಲʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಬಹುಶಃ ಅಕ್ಕಪಕ್ಕದ ಮನೆಯವರು ಮಾಂಸ ಬೇಯಿಸಿದರೆ ಕಷ್ಟ ಆಗುತ್ತದೆ ಎಂಬ ನೋವಿರಬಹುದುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.