ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಚಿನ್ನದ ಅಡಮಾನ ಸಾಲ ಹೆಚ್ಚುತ್ತಿದೆ ಎಂಬ ಆರ್‌ಬಿಐ ವರದಿಯನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದರು. ಈ ವಿಚಾರವಾಗಿ ವಿಪಕ್ಷ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ವಿರುದ್ಧ ಹರಿಹಾಯ್ದಿದ್ದಾರೆ.
ಮಂಗಳಸೂತ್ರ ಕಸಿಯಲಾಗುತ್ತದೆ ಎನ್ನುವ ಮೋದಿ ಚುನಾವಣಾ ಸಮಯದ ಮಾತು ನಿಜವಾಗಿದೆ. ಇವರ ಆಡಳಿತದ ಅವಧಿಯಲ್ಲಿ ಒತ್ತಾಯವಾಗಿ ಮಂಗಳಸೂತ್ರ ಅಡಮಾನ ಇಡಲಾಗುತ್ತಿದೆ ಎಂದು ಟಾಂಗ್ ನೀಡಿದ್ದಾರೆ.
ನೋಟು ರದ್ಧತಿ ಮೂಲಕ ಮಹಿಳೆಯರ ಹಣವನ್ನು ಕಣ್ಮರೆಯಾಗುವಂತೆ ಮಾಡಿದ್ದೀರಿ. ಈಗ ಹಣದುಬ್ಬರ ಮತ್ತು ಮನೆಯ ಉಳಿತಾಯ ಕುಸಿಯುತ್ತಿರುವುದರಿಂದ ಮಹಿಳೆಯರಿಗೆ ಬೇರೆ ದಾರಿ ಇಲ್ಲ ಎಂದು ಹೇಳಿದ್ದಾರೆ.