ಕಳೆದ ಬಾರಿಗಿಂತ ಈ ಬಾರಿ ಬಜೆಟ್ ಗಾತ್ರ ಹೆಚ್ಚು: ಮುಖ್ಯಮಂತ್ರಿ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಬಾರಿ 4,09,549 ಕೋಟಿ ರೂಪಾಯಿ ಬಜೆಟ್ ಮಂಡಿಸಿದ್ದೇನೆ. ಕಳೆದ ಬಾರಿಗಿಂತ ಈ ಬಾರಿ ಬಜೆಟ್ ಗಾತ್ರ ಹೆಚ್ಚಾಗಿದೆ. 38,166 ಕೋಟಿ ರೂಪಾಯಿ ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

2025-26ನೇ ಸಾಲಿನ ಬಜೆಟ್ ಮಂಡನೆ ಕುರಿತು ಇಂದು ಬೆಂಗಳೂರಿನಲ್ಲಿ ಅವರು ಸುದ್ದಿಗೋಷ್ಠಿ ನಡೆಸಿದರು. ಕಳೆದ ಬಾರಿಗಿಂತ ಈ ಬಾರಿ ಬೆಳವಣಿಗೆ ಇದರ ಶೇಕಡ 10.3ರಷ್ಟು ಹೆಚ್ಚಾಗಿದೆ ಈ ಬಾರಿ 2,92, 476 ಕೋಟಿ ರಾಜಸ್ವ ಸಂಗ್ರಹವಾಗಿದೆ. ರಾಜಸ್ವ 3,11,738 ಕೋಟಿ ರೂಪಾಯಿ ಆಗಿದೆ ಎಂದರು.

ಸಾಲ ಹೆಚ್ಚಾಗಿದೆ ಎಂದು ವಿಪಕ್ಷ ನಾಯಕರು ಹೇಳುತ್ತಾರೆ. ಜೆಎಸ್ಡಿಪಿ ಶೇಕಡ 25ರೊಳಗೆ ಸಾಲದ ಪ್ರಮಾಣ ಇರಬೇಕು ಆರ್ಥಿಕವಾಗಿ ಶೇ. 25 ರಷ್ಟು ಕಾಪಾಡಬೇಕು ಅಂದರೆ 25 ಪರ್ಸೆಂಟ್ ಒಳಗೆ ಸಾಲ ಇರಬೇಕು, ಫಿಸಿಕಲ್ ರೆಸ್ಪಾನ್ಸಿಬಿಲಿಟಿ ಮ್ಯಾನೇಜ್ಮೆಂಟ್ ಆಕ್ಟ್ ಪ್ರಕಾರವೇ ಶೇಕಡ 24.91ರ ಪ್ರಮಾಣದಲ್ಲಿ ಸಾಲ ಮಾಡಲಾಗಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!