ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ವಾಯುಪಡೆಯ ಜಾಗ್ವಾರ್ ಫೈಟರ್ ಜೆಟ್ ಹರಿಯಾಣದ ಪಂಚಕುಲದಲ್ಲಿ ಅಪಘಾತಕ್ಕೀಡಾಗಿದ್ದು, ಪೈಲಟ್ ಸುರಕ್ಷಿತವಾಗಿ ಪಾರಾಗಿದ್ದಾರೆ.
ಅಂಬಾಲಾ ವಾಯುನೆಲೆಯಿಂದ ಜಾಗ್ವಾರ್ ಫೈಟರ್ ಜೆಟ್ ತರಬೇತಿಗಾಗಿ ಟೇಕ್ ಅಪ್ ಆಗಿತ್ತು.
ಅಪಘಾತದ ಕಾರಣವನ್ನು ತನಿಖೆ ಮಾಡಲು ವಾಯುಪಡೆಯು ವಿಚಾರಣಾ ನ್ಯಾಯಾಲಯವನ್ನು ಪ್ರಾರಂಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.