ಹೊಸದಿಗಂತ ಕಾಸರಗೋಡು:
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖ್, ಹೊಸ ದಿಗಂತ ಪತ್ರಿಕೆಯ ಕಾಸರಗೋಡು ಜಿಲ್ಲಾ ನಿವೃತ್ತ ವರದಿಗಾರ ಕಿದೂರು ಶಂಕರನಾರಾಯಣ ಭಟ್ (72) ಸೋಮವಾರ ಮಧ್ಯಾಹ್ನ ನಿಧನ ಹೊಂದಿದ್ದಾರೆ.
ಸಹಕಾರ ಭಾರತಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿದ್ದ ಅವರು ಆರ್ ಎಸ್ಎಸ್ ನಲ್ಲಿ ವಿವಿಧ ಜವಾಬ್ದಾರಿಗಳನ್ನು ವಹಿಸಿ ಸಮಾಜಮುಖಿಯಾಗಿ ಅಪಾರ ಸೇವೆ ಸಲ್ಲಿಸಿದ್ದರು. ಅಲ್ಲದೆ ಧಾರ್ಮಿಕ, ಸಾಮಾಜಿಕವಾಗಿ ಮಾರ್ಗದರ್ಶಕರಾಗಿದ್ದರು. ಜಿಲ್ಲೆಯಲ್ಲಿ ಹೊಸ ದಿಗಂತ ಪತ್ರಿಕೆಯ ಬೆಳವಣಿಗೆಗೆ ಮಹತ್ತರ ಕೊಡುಗೆಗಳನ್ನು ಸಲ್ಲಿಸಿದ್ದರು.
ಅಲ್ಪಕಾಲದ ಅನಾರೋಗ್ಯ ನಿಮಿತ್ತ ಕಳೆದ ಎರಡು ತಿಂಗಳುಗಳಿಗೂ ಅಧಿಕ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಪತ್ನಿ ಕೃಷ್ಣವೇಣಿ ಕಿದೂರು, ಓರ್ವ ಪುತ್ರಿ, ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.