ಹೊಸದಿಗಂತ ಡಿಜಿಟಲ್ ಡೆಸ್ಕ್:
9ನೇ ಆವೃತ್ತಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ದದ ಫೈನಲ್ ಪಂದ್ಯದಲ್ಲಿ ಭಾರತ ಗೆದ್ದು ಬೀಗಿದೆ.
ಇನ್ನು ಐಸಿಸಿ ಚಾಂಪಿಯನ್ಸ್ ಟ್ರೋಫಿ ನಗದು ಬಹುಮಾನದ ವಿಚಾರಕ್ಕೆ ಬರುವುದಾದರೇ, ಕ್ರಿಕೆಟ್ ಟೂರ್ನಿಯ ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡಕ್ಕೆ ನಗದು ಬಹುಮಾನ 2.24 ಮಿಲಿಯನ್ ಡಾಲರ್ ಅಗಿರಲಿದೆ ಎಂದು ಐಸಿಸಿ ಘೋಷಣೆ ಮಾಡಿತ್ತು. ಇದೀಗ ಚಾಂಪಿಯನ್ ಪಟ್ಟ ಅಲಂಕರಿಸಿದ ಟೀಂ ಇಂಡಿಯಾ ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಸುಮಾರು 20 ಕೋಟಿ ರೂಪಾಯಿ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿದೆ.
ಇನ್ನು ರನ್ನರ್ ಅಪ್ ಸ್ಥಾನ ಪಡೆದ ನ್ಯೂಜಿಲೆಂಡ್ ಕ್ರಿಕೆಟ್ ತಂಡವು 1.2 ಮಿಲಿಯನ್ ಡಾಲರ್(₹7.72 ಕೋಟಿ ರೂಪಾಯಿ), ಸೆಮಿಫೈನಲ್‌ನಲ್ಲಿ ಸೋತ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ತಲಾ 5,60,000 ಯುಎಸ್ ಡಾಲರ್(4.86 ಕೋಟಿ ರೂಪಾಯಿ)ಗಳನ್ನು ತನ್ನದಾಗಿಸಿಕೊಂಡವು.
ಇನ್ನುಳಿದಂತೆ ಗ್ರೂಪ್ ಸ್ಟೇಜ್‌ನಲ್ಲಿ ತಂಡವೊಂದು ಪ್ರತಿ ಗೆಲುವಿಗೆ 34,000 ಡಾಲರ್(30 ಲಕ್ಷ ರೂಪಾಯಿ) ನಗದು ಬಹುಮಾನ ತನ್ನದಾಗಿಸಿಕೊಂಡಿತು. ಇನ್ನು ಟೂರ್ನಿಯಲ್ಲಿ 5 ಹಾಗೂ 6ನೇ ಸ್ಥಾನ ಪಡೆದ ತಂಡಗಳು ತಲಾ 3 ಕೋಟಿ ರೂಪಾಯಿ, 7 ಹಾಗೂ 8ನೇ ಸ್ಥಾನ ಪಡೆದ ತಂಡಗಳು ತಲಾ 1.2 ಕೋಟಿ ರೂಪಾಯಿ ತನ್ನದಾಗಿಸಿಕೊಂಡವು.
ಇನ್ನು ಇದಷ್ಟೇ ಅಲ್ಲದೇ 8 ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಖಚಿತ ನಗದು ಬಹುಮಾನ ತಲಾ 1.08 ಕೋಟಿ ರುಪಾಯಿಗಳನ್ನು ತಮ್ಮದಾಗಿಸಿಕೊಂಡವು.