ಹೊಸದಿಗಂತ ಡಿಜಿಟಲ್ ಡೆಸ್ಕ್:
ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ನ (FBI) ಗೆ ಬೇಕಿದ್ದ ಮೋಸ್ಟ್ ವಾಟೆಂಡ್ ಲಿಸ್ಟ್ನಲ್ಲಿದ್ದ ಅಂತಾರಾಷ್ಟ್ರೀಯ ಡ್ರಗ್ ಡೀಲರ್ನನ್ನು ಪಂಜಾಬ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಲಂಬಿಯಾ, ಅಮೆರಿಕ, ಕೆನಡಾ ಮತ್ತು ಇತರ ದೇಶಗಳಲ್ಲಿ ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿದ್ದ ಶೆಹ್ನಾಜ್ ಸಿಂಗ್ನನ್ನು ವಶಕ್ಕೆ ಪಡೆಯಲಾಗಿದೆ.
ಅಮೆರಿಕದಲ್ಲಿ ಆತನ ಸಹಚರರನ್ನು ಬಂಧಿಸಿದ ಬಳಿಕ ಕಾರ್ಯಾಚರಣೆ ನಡೆಸಿ ಶೆಹ್ನಾಜ್ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
ಶಾನ್ ಭಿಂದರ್ ಅಲಿಯಾಸ್ ಶೆಹ್ನಾಜ್ ಸಿಂಗ್, ಫೆಬ್ರವರಿ 26ರಂದು ತನ್ನ ಸಹಚರರ ಬಂಧನದ ಬಳಿಕ ಭಾರತಕ್ಕೆ ಪಲಾಯನ ಮಾಡಿದ್ದನು.
ಇತ್ತ ಅಮೆರಿಕದಲ್ಲಿ ಶೆಹ್ನಾಜ್ ಸಹಚರರ ಬಂಧನದ ಸಂದರ್ಭ ಅಧಿಕಾರಿಗಳು ಆರೋಪಿಗಳ ನಿವಾಸ ಮತ್ತು ವಾಹನಗಳಿಂದ 391 ಕೆಜಿ ಮೆಥಾಂಫೆಟಮೈನ್, 109 ಕೆಜಿ ಕೊಕೇನ್ ಮತ್ತು ನಾಲ್ಕು ಬಂದೂಕುಗಳನ್ನು ವಶಪಡಿಸಿಕೊಂಡಿದ್ದರು.