ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇರೆ ಗಂಡಸರು ರೇಗಿಸಿದರೆ ಮಗಳು ಓಡಿ ಬಂದು ತಂದೆಯ ಬಳಿ ಕಂಪ್ಲೆಂಟ್ ಮಾಡುತ್ತಾಳೆ, ಭಯ ಎಂದು ತಂದೆಯ ಹಿಂದೆ ನಿಲ್ಲುತ್ತಾಳೆ. ಆದರೆ ಕಾಮುಕರಿಂದ ಮಗಳನ್ನು ರಕ್ಷಿಸಬೇಕಿದ್ದ ತಂದೆಯೇ ಮಗಳನ್ನು ಗರ್ಭಿಣಿ ಮಾಡಿದ್ದಾನೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿ ಈ ಪೈಶಾಚಿಕ ಕೃತ್ಯ ನಡೆದಿದೆ. ಅಪ್ಪಯ್ಯಪ್ಪ ಎನ್ನುವ ವ್ಯಕ್ತಿ ತನ್ನ 20 ವರ್ಷದ ಮಗಳ ಮೇಲೆ 5 ತಿಂಗಳಿನಿಂದ ನಿರಂತರ ಅತ್ಯಾಚಾರ ಎಸಗಿದ್ದಾನೆ. ಪರಿಣಾಮ ಮಗಳು ಗರ್ಭಿಣಿಯಾಗಿದ್ದಾಳೆ. ಯುವತಿ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಹೋದಾಗ ತಂದೆಯ ವಿಕೃತ ಕಾಮ ಬೆಳಕಿಗೆ ಬಂದಿದೆ.
ಅಪ್ಪಯ್ಯಪ್ಪಗೆ ಮೂರು ಹೆಣ್ಣು ಒಂದು ಗಂಡು ಮಗು ಇದ್ದು, ತಾಯಿ ಇಲ್ಲದ ಮಕ್ಕಳನ್ನು ತಾನೇ ನೋಡಿಕೊಳ್ಳುತ್ತಿದ್ದ. ಮೊದಲ ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಕೊಟ್ಟಿದ್ದಾನೆ. ಆದ್ರೆ, 20 ವರ್ಷದ ಮೂರನೇ ಮಗಳ ಮೇಲೆ ಅತ್ಯಾಚಾರ ಮಾಡಿದ್ದಾನೆ.