ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಬಾಸ್ಕೆಟ್ ಆಟಗಾರ್ತಿಯೊಬ್ಬರು ಮೃತಪಟ್ಟಿದ್ದು, ಅವರ ಸಾವಿಗೆ ಕಾರಣ ತಿಳಿದುಬಂದಿಲ್ಲ.
ನ್ಯಾಷನಲ್ ಲೆವೆಲ್ ಬಾಸ್ಕೆಟ್ ಬಾಲ್ ಟೂರ್ನಿಗಳಲ್ಲಿ ಭಾಗಿಯಾಗಿದ್ದ 26 ವರ್ಷದ ಸೋನಿಯಾ ನಿನ್ನೆ ಬೆಳಗ್ಗೆ 10 ಗಂಟೆ ಬೆಂಗಳೂರಿನ ಪೊಟ್ಲಪ್ಪ ಗಾರ್ಡನ್ ಬಳಿ ಇರುವ ಮನೆಯಲ್ಲಿ ಮೃತಪಟ್ಟಿದ್ದಾಳೆ.
ಆದರೆ ಆಕೆ ಮೃತಪಟ್ಟಿದ್ದು ಹೇಗೆ ಎನ್ನುವ ಮಾಹಿತಿ ಸುತ್ತ ನೂರಾರು ಅನುಮಾನಗಳಿವೆ. ಕೆಲವರು ಆಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಿದ್ದಾರೆ. ಆದರೆ ಕುಟುಂಬದವರು ಆಕೆ ಬಾತ್‌ರೂಮ್‌ನಲ್ಲಿ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡು ಮೃತಪಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ.
ಕಳೆದ ಏಳೆಂಟು ವರ್ಷಗಳಿಂದ ಬಾಸ್ಕೆಟ್ ಬಾಲ್ ಕ್ರೀಡೆಯಲ್ಲಿ ಗುರುತಿಸಿಕೊಂಡಿದ್ದ ಸೋನಿಯಾ, ರಾಜ್ಯ, ರಾಷ್ಟ್ರೀಯ ಮಟ್ಟದ ಬಾಸ್ಕೆಟ್ ಬಾಲ್ ಟೂರ್ನಿಗಳಲ್ಲಿ ಸೋನಿಯಾ ಭಾಗಿಯಾಗಿದ್ದಳು. ಇನ್ನು ಮುಂದಿನ ತಿಂಗಳು ದುಬೈನಲ್ಲಿ ನಡೆಯಿತ್ತಿರುವ ಟೂರ್ನಿಯಲ್ಲಿ ಸೋನಿಯಾ ಭಾಗವಹಿಸಬೇಕಿತ್ತು.