February 3, 2026
Tuesday, February 3, 2026
spot_img

LIFE | ಯಾವಾಗ್ಲೂ strong ಆಗಿರಬೇಕು ಅನ್ನೋದು ಕೂಡ ಒಂದು ರೀತಿಯ burden ಅಲ್ವಾ?

ಯಾವಾಗಲೂ ನಗುತ್ತಿರಬೇಕು, ಯಾವ ಸಂದರ್ಭ ಬಂದರೂ ಸ್ಟ್ರಾಂಗ್ ಆಗಿರ್ಬೇಕು, ಎಲ್ಲವನ್ನೂ ಒಬ್ಬರೇ ನಿಭಾಯಿಸಬೇಕು ಅನ್ನೋ ನಿರೀಕ್ಷೆ ನಮ್ಮ ಮೇಲೆ ಯಾರೋ ಹೇರಿದ ನಿಯಮವಲ್ಲ… ನಾವು ನಮ್ಮ ಮೇಲೆಯೇ ಹಾಕಿಕೊಂಡ ಹೊಣೆ. “ನೀನು strong ಆಗಿದೀಯಲ್ಲ” ಅನ್ನೋ ಒಂದು ಮಾತು, ಕೆಲವೊಮ್ಮೆ ಮೆಚ್ಚುಗೆಯಂತೆ ಕೇಳಿಸಬಹುದು. ಆದರೆ ಅದೇ ಮಾತು ನಿಧಾನವಾಗಿ ನಮಗೆ ಭಾರವಾಗಿಬಿಡುತ್ತದೆ. ನೋವಿದ್ದರೂ ತೋರಿಸಿಕೊಳ್ಳಬಾರದು, ದಣಿದರೂ ಒಪ್ಪಿಕೊಳ್ಳಬಾರದು ಅನ್ನೋ ಅಭ್ಯಾಸ ನಮ್ಮೊಳಗೆ ಮೌನದ ಒತ್ತಡವನ್ನೇ ಕಟ್ಟಿಬಿಡುತ್ತದೆ.

Strong ಆಗಿರಬೇಕು ಅನ್ನೋದರ ಅರ್ಥ ಎಲ್ಲವನ್ನೂ ಸಹಿಸಿಕೊಳ್ಳಬೇಕು ಅಂತಲ್ಲ. ಆದರೆ ಜೀವನ ನಮಗೆ ಅದನ್ನೇ ಕಲಿಸಿದೆ. ಯಾರಿಗೂ ತೊಂದರೆ ಕೊಡಬಾರದು ಅನ್ನೋ ಭಾವನೆ, “ನಾನು ಹೇಳಿದ್ರೆ ಅವರಿಗೆ ಬೇಜಾರಾಗುತ್ತೆ” ಅನ್ನೋ ಭಯ ಇವೆಲ್ಲ ಸೇರಿ ನಮ್ಮ ಭಾವನೆಗಳಿಗೆ ಬೀಗ ಹಾಕುತ್ತವೆ. ಹೊರಗೆ ನಾವು steady ಆಗಿ ನಿಂತಂತೆ ಕಾಣುತ್ತೇವೆ, ಆದರೆ ಒಳಗೆ ಎಲ್ಲವನ್ನೂ ಒಬ್ಬರೇ ಎತ್ತಿಕೊಂಡು ನಡೆಯುವ ದಣಿವು ನಿಧಾನವಾಗಿ ಜಮೆಯಾಗುತ್ತಿರುತ್ತದೆ.

ಕೆಲವೊಮ್ಮೆ ಬಲಹೀನತೆ ತೋರಿಸಿಕೊಳ್ಳೋದೇ ನಿಜವಾದ ಧೈರ್ಯ. “ಇವತ್ತು ನನಗೆ ಆಗ್ತಿಲ್ಲ” ಅಂತ ಹೇಳೋದು ಸೋಲಲ್ಲ. ಕಣ್ಣೀರು ಬರೋದೂ ದುರ್ಬಲತೆ ಅಲ್ಲ. strong ಆಗಿರೋರಿಗೂ ವಿರಾಮ ಬೇಕು, ಆಧಾರ ಬೇಕು, ಯಾರಾದರೂ “ನೀನು ಇಷ್ಟು ದಿನ ಮಾಡಿದ್ದು ಸಾಕು” ಅಂತ ಹೇಳೋ ಮಾತು ಬೇಕು. ಆದರೆ ನಾವು strong ಅನ್ನೋ ಟ್ಯಾಗ್‌ನಿಂದಲೇ ಆ ಅವಕಾಶವನ್ನೇ ಕಳೆದುಕೊಳ್ಳುತ್ತೇವೆ.

ಜೀವನ ಎಲ್ಲ ದಿನವೂ ಯುದ್ಧವಲ್ಲ. ಪ್ರತಿದಿನ armor ಹಾಕಿಕೊಂಡೇ ಬದುಕಬೇಕಾದ ಅವಶ್ಯಕತೆಯೂ ಇಲ್ಲ. ಕೆಲ ದಿನಗಳು ನಾವು ಕೈಬಿಟ್ಟರೆ ಏನೂ ತಪ್ಪಾಗುವುದಿಲ್ಲ. strong ಆಗಿರೋದಕ್ಕಿಂತ, honest ಆಗಿರೋದು ಮುಖ್ಯ. ನಮ್ಮ ನೋವನ್ನೂ ಒಪ್ಪಿಕೊಳ್ಳುವ ಕ್ಷಣದಿಂದಲೇ burden ಸ್ವಲ್ಪ ಸ್ವಲ್ಪವಾಗಿ ಹಗುರವಾಗುತ್ತದೆ. strong ಆಗಿರಬೇಕು ಅನ್ನೋ ಹಠ ಬಿಟ್ಟು, ಮಾನವೀಯವಾಗಿರಲು ಅವಕಾಶ ಕೊಟ್ಟಾಗಲೇ ಜೀವನ ಸ್ವಲ್ಪ ಸುಲಭವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !