ಮುಲ್ಕಿಯಲ್ಲಿ ಭೀಕರ ಅಪಘಾತ: ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ, ಇಬ್ಬರು ಯುವಕರ ಸಾವು

ಹೊಸದಿಗಂತ ವರದಿ, ಮಂಗಳೂರು:

ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಬಟ್ಟಕೋಡಿ ಪೆಟ್ರೋಲ್ ಬಂಕ್ ಬಳಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ಹಾಗೂ ಸಹ ಸವಾರ ಮೃತಪಟ್ಟಿದ್ದಾರೆ .

ಮೃತರನ್ನು ಮೂಲತಃ ಧಾರವಾಡ ಸವದತ್ತಿ ಕಲ್ಲೂರು ನಿವಾಸಿಗಳಾದ ಪದ್ಮನ್ನೂರು ಹಾಗೂ ಮುಲ್ಕಿಯಲ್ಲಿ ವಾಸ್ತವ್ಯವಿರುವ ನವೀನ್ (26) ಆತ್ಮಾನಂದ (27) ಎಂದು ಗುರುತಿಸಲಾಗಿದೆ .

Oplus_131072

ಮೃತ ನವೀನ್ ಮತ್ತು ಆತ್ಮಾನಂದ ಬೈಕಿನಲ್ಲಿ ಪದ್ಮನ್ನೂರು ಕಡೆಯಿಂದ ಕಿನ್ನಿಗೋಳಿ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದು ಬಟ್ಟಕೋಡಿ ಪೆಟ್ರೋಲ್ ಬಂಕ್ ಬಳಿ ಬರುತ್ತಿದ್ದಾಗ ಸವಾರ ಆತ್ಮಾನಂದ ರವರ ನಿಯಂತ್ರಣ ತಪ್ಪಿ ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ .

ಅಪಘಾತದ ರಭಸಕ್ಕೆ ಸ್ಥಳದಲ್ಲಿ ಭಾರೀ ಶಬ್ದ ಉಂಟಾಗಿದ್ದು ಘಟನೆಯಲ್ಲಿ ಬೈಕ್ ನಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.

ಮೃತರಿಬ್ಬರು ಕಿನ್ನಿಗೋಳಿ ಸಮೀಪದ ಪದ್ಮನ್ನೂರು ಬಳಿ ಪ್ರತ್ಯಂಗಿರಾ ಎಂಬ ರೆಡಿಮೇಡ್ ಆವರಣ ಗೋಡೆ ನಿರ್ಮಾಣದ ಸಂಸ್ಥೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು . ಮೃತ ನವೀನ್ ಕುಮಾರ್ ವಿವಾಹಿತನಾಗಿದ್ದರೆ, ಆತ್ಮಾನಂದ ಅವಿವಾಹಿತನಾಗಿದ್ದಾನೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!