ಲ್ಯಾಂಡ್ ಜಿಹಾದ್ ವಿರುದ್ಧ ದಾಖಲೆ ಸಹಿತ ಹೋರಾಟ: ಪ್ರಮೋದ್ ಮುತಾಲಿಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಾದ್ಯಂತ ನಡೆಯುತ್ತಿರುವ ಲ್ಯಾಂಡ್ ಜಿಹಾದ್ ವಿರುದ್ಧ ಮುಂದಿನ ದಿನಗಳಲ್ಲಿ ಹಿಂದೂಪರ ಸಂಘಟನೆಗಳ ಒಕ್ಕೂಟದಿಂದ ದಾಖಲೆ ಸಹಿತ ಹೋರಾಟ ನಡೆಸಲಾಗುವುದು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.

ನಗರದಲ್ಲಿ ಹಿಂದೂಪರ ಸಂಘಟನೆಗಳ ಒಕ್ಕೂಟದಿಂದ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಗತ್ತಿನಾದ್ಯಂತ ಇಸ್ಲಾಮಿಕ್ ಕರಣದ ಮಾನಸೀಕತೆ ಇದೆ. ಇಸ್ಲಾಮಿನ ಜನಸಂಖ್ಯೆ, ಜಾಗ , ಅಧಿಕಾರ ಹೀಗೆ ಅನೇಕ ವಿಭಾಗಗಳಲ್ಲಿ ಇಸ್ಲಾಮಿಕ್ ಜಿಹಾದ್ ನಡೆಯುತ್ತಿದೆ. ಅದರಲ್ಲಿ ಪ್ರಮುಖವಾದದ್ದು ಲ್ಯಾಂಡ್ ಜಿಹಾದ್. ಜಾಗವನ್ನೇ ತಮ್ಮ ಕೈಯಲ್ಲಿ ತೆಗೆದುಕೊಂಡರೆ, ರಾಜ್ಯವನ್ನೇ ತಮ್ಮ ಕೈಯಲ್ಲಿ ನಡೆಸಬಹುದು ಎಂಬ ಭ್ರಮೆಯಲ್ಲಿದ್ದಾರೆ ಎಂದರು.

ವಕ್ಫ್ ಬೋರ್ಡ್ ಮೋಸ್ಟ್ ಡೇಂಜರಸ್ ಬೋರ್ಡ್. ಇದು ಭಯಾನಕವಾಗಿ ದೇಶದ ಜಾಗವನ್ನು ಅಧಿಕೃತವಾಗಿ, ಡಿಸಿಯೂ ಪ್ರಶ್ನೆ ಮಾಡದ ಹಾಗೆ ವ್ಯವಸ್ಥಿತವಾಗಿ ಕಬಳಿಸುತ್ತದೆ. ಈ ವಿಚಾರವಾಗಿ ದೇಶದಲ್ಲಿ ಚರ್ಚೆಯಾಗಿದೆ. ೧೦ ಲಕ್ಷ ಎಕರೆ, ಸರ್ಕಾರದ ಬಳಿಯೂ ಇರದಷ್ಟು ಜಾಗ ವಕ್ಫ್ಬೋರ್ಡ್ ಮೂಲಕ ಇಸ್ಲಾಮಿಕನ ಕೈಯಲ್ಲಿದೆ ಎಂದರು.

ಗೋಮಾಳ, ಸರ್ಕಾರಿ ಜಾಗ, ಖಾಸಗಿ ಜಾಗ, ಅರಣ್ಯಇಲಾಖೆ, ಬೆಟ್ಟಗುಡ್ಡ ಕಡೆಗಳಲ್ಲಿ ಗೋರಿ, ದರ್ಗಾ ಮಸೀದಿ ಮಾಡಿ ಸಾವಿರಾರರು ಎಕರೆ ಕಬಳಿಸುತ್ತಿರುವುದು ದಾಖಲೆ ಸಮೇತ ನಾವು ಹೇಳಬಹುದು. ಹಿಂದೂಗಳನ್ನು ಬೆದರಿಸಿ, ಹೆದರಿಸಿ, ಒತ್ತಾಯ ಮಾಡಿ, ಆಸೆ ಅಮೀಷ ತೋರಿಸಿ ಜಾಗಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅದೇ ಮಾದರಿಯಲ್ಲಿ ಎಲ್ಲ ಪಕ್ಷದ ರಾಜಕಾರಣಿಗಳು ಕಮೀಷನ್‌ಗೋಸ್ಕರ ಇಸ್ಲಾಮಿಕ್‌ಗೆ ನೀಡುತ್ತಿದ್ದಾರೆ ಎಂದರು.

ಹತ್ತಾರು ವರ್ಷಗಳಿಂದ ದೇವಾಲಯವಿದ್ದ ಜಾಗ, ನೂರಾರು ತರಕಾರಿ, ಹೂವು, ಹಣ್ಣು ಮಾರಾಟಗಾರಿಗೆ ಆಶ್ರಯವಾಗಿದ್ದ ಸಿದ್ದಿವಿನಾಯಕ ಮಾರುಕಟ್ಟೆ ಜಾಗವನ್ನು ಮಂಗಳೂರಿನ ಖಾಸಗಿ ಟ್ರಸ್ಟ್ಗೆ ಸೇರಿದ ವ್ಯಕ್ತಿಗಳಿಗೆ ಮಾಲ್ ಕಟ್ಟಲು ಗುತ್ತಿಗೆ ನೀಡುವ ಮೂಲಕ ತುಮಕೂರು ನಗರದಲ್ಲಿ ಲ್ಯಾಂಡ್ ಜಿಹಾದ್‌ಗೆ ಬಿಜೆಪಿ ಶಾಸಕರು ಬೆಂಬಲವಾಗಿ ನಿಂತಿದ್ದಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!