ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರ ಸುರಕ್ಷಿತ ಮರಳುವಿಕೆಯನ್ನು ಶ್ವೇತಭವನ ಶ್ಲಾಘಿಸಿದ್ದು, ಅಧ್ಯಕ್ಷ ಟ್ರಂಪ್ ಅವರ ಬದ್ಧತೆಯ ನೆರವೇರಿಕೆ ಎಂದು ಒತ್ತಿ ಹೇಳಿದೆ.
“ಒಂಬತ್ತು ತಿಂಗಳ ಕಾಲ ಬಾಹ್ಯಾಕಾಶದಲ್ಲಿ ಸಿಲುಕಿದ್ದ ಗಗನಯಾತ್ರಿಗಳನ್ನು ರಕ್ಷಿಸುವುದಾಗಿ ಅಧ್ಯಕ್ಷ ಟ್ರಂಪ್ ಪ್ರತಿಜ್ಞೆ ಮಾಡಿದ್ದರು. ಇಂದು, ಅವರು ಸುರಕ್ಷಿತವಾಗಿ ಅಮೆರಿಕ ಕೊಲ್ಲಿಯಲ್ಲಿ ಲ್ಯಾಂಡಿಗ್ ಆಗಿದ್ದಾರೆ, @ElonMusk, @SpaceX ಮತ್ತು @NASA ಗೆ ಧನ್ಯವಾದಗಳು!” ಎಂದು ಶ್ವೇತಭವನ X ನ ಪೋಸ್ಟ್‌ನಲ್ಲಿ ಬರೆದಿದೆ.