ಹೊಸದಿಗಂತ ಡಿಜಿಟಲ್ ಡೆಸ್ಕ್;
ಎಲ್ಲಾ ಲೋಕಸಭಾ ಸಂಸದರಿಗೆ ಬಿಜೆಪಿ ಮೂರು ಸಾಲಿನ ವಿಪ್ ಜಾರಿ ಮಾಡಿದ್ದು, 2025-26ರ ಕೇಂದ್ರ ಬಜೆಟ್ ಅಂಗೀಕಾರಕ್ಕಾಗಿ ನಾಳೆ ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಸೂಚಿಸಿದೆ.
ಬಿಜೆಪಿಯ ಎಲ್ಲಾ ಲೋಕಸಭಾ ಸದಸ್ಯರು ದಿನವಿಡೀ ಸದನದಲ್ಲಿ ಸಕಾರಾತ್ಮಕವಾಗಿ ಹಾಜರಿರಬೇಕು ಮತ್ತು ಸರ್ಕಾರದ ನಿಲುವುಗಳನ್ನು ಬೆಂಬಲಿಸಬೇಕು ಎಂದು ಕೇಸರಿ ಪಕ್ಷ ತನ್ನ ವಿಪ್ ನಲ್ಲಿ ತಿಳಿಸಿದೆ.
ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025-26ರ ಸಾಲಿನ ಕೇಂದ್ರ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸಿದ್ದರು.