ಹೊಸದಿಗಂತ ಡಿಜಿಟಲ್ ಡೆಸ್ಕ್;
ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ನಾಗ್ಪುರ ಕ್ಷೇತ್ರದಿಂದ ಗೆದ್ದಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ನಾಗ್ಪುರದ ಬಾಂಬೆ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ಸೂರಜ್ ಬಲರಾಮ್ ಮಿಶ್ರಾ ಎಂಬವರು ಸಲ್ಲಿಸಿದ ಅರ್ಜಿಯಲ್ಲಿ, ಗಡ್ಕರಿ ಅವರ ಪಕ್ಷವಾದ ಬಿಜೆಪಿ ಅಭ್ಯರ್ಥಿಯ ಛಾಯಾಚಿತ್ರ, ಹೆಸರು ಮತ್ತು ಪಕ್ಷದ ಚಿಹ್ನೆಯ ಜೊತೆಗೆ ಮತದಾರರ ವಿವರಗಳನ್ನು ಮುದ್ರಿಸುವ ಸಾಫ್ಟ್‌ವೇರ್ ಅನ್ನು ರಚಿಸಿದ್ದು, ಮತ್ತು ಈ ಚೀಟಿಗಳನ್ನು ಮತದಾರರಿಗೆ ವಿತರಿಸುವ ಮೂಲಕ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದರು.
ನ್ಯಾಯಮೂರ್ತಿ ಉರ್ಮಿಳಾ ಜೋಶಿ-ಫಾಲ್ಕೆ ಅವರು ಅಭ್ಯರ್ಥಿಯ ಕಡೆಯಿಂದ ಯಾವುದೇ ನೇರ ಅಥವಾ ಪರೋಕ್ಷ ಹಸ್ತಕ್ಷೇಪದ ಪ್ರಯತ್ನವಿಲ್ಲ . ಅಗತ್ಯ ಸಂಗತಿಗಳನ್ನು ಒದಗಿಸಲು ಅಥವಾ ಆಪಾದಿತ ಕ್ರಮಗಳು ಚುನಾವಣಾ ಫಲಿತಾಂಶಗಳ ಮೇಲೆ ಹೇಗೆ ಪರಿಣಾಮ ಬೀರಿವೆ ಎಂಬುದನ್ನು ತಿಳಿಸುವಲ್ಲಿ ವಿಫಲವಾಗಿದೆ ಎಂದು ಹೇಳುವ ಮೂಲಕ ಅರ್ಜಿಯನ್ನು ವಜಾಗೊಳಿಸಿದೆ.