ಮೇಷ
ದೊಡ್ಡ ಕೆಲಸಕ್ಕೆ ಕೈ ಹಾಕುತ್ತೀರಾ? ಯಶ ನಿಮ್ಮದಾಗಲಿದೆ. ಕುಟುಂಬ ಸದಸ್ಯರ ಅಹವಾಲು ಆಲಿಸಿ. ಅವರ ಬೇಡಿಕೆಗೆ ಸ್ಪಂದಿಸಿರಿ.
ವೃಷಭ
ವೃತ್ತಿಯಲ್ಲಿ ಸಣ್ಣ ಸಮಸ್ಯೆ ತಲೆದೋರಬಹುದು. ಇತರರ ಅಸಹಕಾರ. ಸಕಾಲದಲ್ಲಿ ಕೆಲಸ ಮುಗಿಸಲು ಅಸಾಧ್ಯ. ಮಿಥುನ
ಮನೆಯಲ್ಲಿ ಭಿನ್ನಾಭಿಪ್ರಾಯ ಉಂಟಾದೀತು. ತಾಳ್ಮೆಯಿಂದ ನಿಭಾಯಿಸಿ. ಆರೋಗ್ಯಕರ ಜೀವನ ಶೈಲಿ ರೂಪಿಸಿಕೊಳ್ಳಿ.
ಕಟಕ
ಕಾರ್ಯಸಾಧನೆ. ನಿಮ್ಮ ಕಾರ್ಯವೈಖರಿ ಇತರರನ್ನು ಆಕರ್ಷಿಸಲಿದೆ. ಪ್ರೀತಿಯ ವಿಷಯದಲ್ಲಿ ಪೂರಕ ಬೆಳವಣಿಗೆ. ಧನ ಪ್ರಾಪ್ತಿ ಹೆಚ್ಚಳ.
ಸಿಂಹ
ಹಣ ಬಾಕಿ ಉಳಿಸಿದ್ದರೆ ಅದನ್ನು ತೀರಿಸಿ. ಇಲ್ಲವಾದರೆ ಸಂಕಷ್ಟಕ್ಕೆ ಸಿಲುಕುವಿರಿ. ಪ್ರೀತಿಪಾತ್ರರ ಜತೆ ಆತ್ಮೀಯ ಕಾಲಕ್ಷೇಪ.
ಕನ್ಯಾ
ಹೊಸ ಚಿಂತನೆ ಅಳವಡಿಸಲು ಹಿಂಜರಿಕೆ ತೋರದಿರಿ. ಅದರಿಂದ ಒಳಿತೇ ಆದೀತು. ನಿಮ್ಮ ಸುತ್ತ ಇಂದು ಉತ್ಸಾಹದ ವಾತಾವರಣ.
ತುಲಾ
ವೃತ್ತಿ ಸಂಬಂಧ ಪ್ರಯಾಣ ಸಾಧ್ಯತೆ. ವೆಚ್ಚದಲ್ಲಿ ಕೆಲವು ಬೆಳವಣಿಗೆ ನಿಮಗೆ ಒತ್ತಡ ಉಂಟು ಮಾಡಬಹುದು. ಅನವಶ್ಯ ಖರ್ಚು ತಪ್ಪಿಸಿರಿ.
ವೃಶ್ಚಿಕ
ಅಗತ್ಯಕ್ಕಿಂತ ಹೆಚ್ಚೇ ಕೆಲಸ ಮಾಡಬೇಕಾದ ಪ್ರಸಂಗ. ಫಲ ಮಾತ್ರ ನಿಮ್ಮ ನಿರೀಕ್ಷೆಗೆ ಕಡಿಮೆ. ಬೇಸರ ಬೇಡ. ಒಳಿತಿನ ಕಾಲ ಬರಲಿದೆ.
ಧನು
ಉದ್ಯಮದಲ್ಲಿ ಹೊಸ ಬೆಳವಣಿಗೆ. ಧನಾಗಮ. ಬಿಕ್ಕಟ್ಟೊಂದು ಸುಗಮ ಪರಿಹಾರ ಕಾಣುವುದು.ಕೌಟುಂಬಿಕ ಸಂತೃಪ್ತಿ. ಬಂಧುಗಳ ಸಹಕಾರ.
ಮಕರ
ಕಚೇರಿಯಲ್ಲಿ ನಿಮ್ಮ ಅಭಿಪ್ರಾಯಕ್ಕೆ ಮನ್ನಣೆ ದೊರಕಲಿದೆ. ಹಿರಿಯರ ಜತೆ ಉತ್ತಮ ಸೌಹಾರ್ದ. ಕೌಟುಂಬಿಕ ಒತ್ತಡ ಪರಿಹಾರ, ನಿರಾಳತೆ.
ಕುಂಭ
ಎಲ್ಲರ ಜತೆ ಸೌಹಾರ್ದ ಸಂಬಂಧ ಇಟ್ಟುಕೊಳ್ಳಿ. ಇತರರ ವರ್ತನೆ ನಿಮ್ಮ ಮನಶ್ಯಾಂತಿ ಕಲಕಲು ಅವಕಾಶ ಕೊಡಬೇಡಿ.
ಮೀನ
ಮೊದಲಿಗೆ ನಿಮ್ಮ ಕೆಲಸ ಮುಗಿಸಿ. ಬಳಿಕ ಇತರರ ನೆರವಿಗೆ ಧಾವಿಸಿ. ಅವಿರತ ಶ್ರಮದಿಂದ ನಿಮ್ಮ ಗುರಿ ಪ್ರಾಪ್ತಿ. ಆರೋಗ್ಯಕರ ಆಹಾರ ಸೇವಿಸಿರಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ