CINE | ಒಟಿಟಿಗೆ ಬರೋ ಮುನ್ನವೇ ಆನ್‌ಲೈನ್‌ನಲ್ಲಿ ಛಾವಾ ಸಿನಿಮಾ ಲೀಕ್‌, ಸಿಕ್ಕಾಪಟ್ಟೆ ಲಾಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿಕ್ಕಿ ಕೌಶಲ್‌ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಛಾವಾ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿದೆ. ಈಗಲೂ ಥಿಯೇಟರ್‌ನಲ್ಲಿ ಓಡುತ್ತಿರುವ ಛಾವಾ ಸಿನಿಮಾ ಟೀಂಗೆ ಶಾಕಿಂಗ್‌ ನ್ಯೂಸ್‌ ಎದುರಾಗಿದೆ.

ಥಿಯೇಟರ್‌ನಲ್ಲಿ ಸಿನಿಮಾ ಓಡುತ್ತಿದೆ, ಹೀಗಾಗಿ ಇನ್ನೂ ಒಟಿಟಿಗೆ ಫಿಲಮ್‌ ಕಾಲಿಟ್ಟಿಲ್ಲ. ಬಟ್‌ ಇದಕ್ಕೂ ಮುನ್ನವೇ ಆನ್‌ಲೈನ್‌ನಲ್ಲಿ ಸಿನಿಮಾ ಲೀಕ್‌ ಆಗಿದೆ. ಇದು ಚಿತ್ರತಂಡಕ್ಕೆ ಲಾಸ್‌ ಮಾಡಿದೆ.

‘ಛಾವ’ ಸಿನಿಮಾ ಚಿತ್ರಮಂದಿರದಲ್ಲಿ ಎಷ್ಟು ಬಾಚಿಕೊಳ್ಳಬೇಕೋ ಅಷ್ಟು ಹಣವನ್ನು ಈಗಾಗಲೇ ಬಾಚಿಕೊಂಡಿದೆ. ಇನ್ನೇನಿದ್ದರೂ ಒಟಿಟಿಯಲ್ಲಿ ಈ ಸಿನಿಮಾ ಅಬ್ಬರಿಸಬೇಕು. ಮೂಲಗಳ ಪ್ರಕಾರ, ಏಪ್ರಿಲ್​ 11ರಂದು ನೆಟ್​ಪ್ಲಿಕ್ಸ್​ ಮೂಲಕ ಈ ಸಿನಿಮಾ ಒಟಿಟಿಗೆ ಕಾಲಿಡಲಿದೆ. ಆದರೆ ಅದಕ್ಕೂ ಮುನ್ನ ಆನ್​ಲೈನ್​​ನಲ್ಲಿ ಸಿನಿಮಾ ಲೀಕ್ ಆಗಿದ್ದರಿಂದ ಒಟಿಟಿ ಬಿಸ್ನೆಸ್ ಮೇಲೆ ಖಂಡಿತಾ ಪೆಟ್ಟು ಬೀಳಲಿದೆ.

ಇದು ಸೂಪರ್​ ಹಿಟ್ ಸಿನಿಮಾ ಆದ್ದರಿಂದ ದೊಡ್ಡ ಮೊತ್ತಕ್ಕೆ ಒಟಿಟಿ ಡೀಲ್ ನಡೆದಿರುತ್ತದೆ. ಆ ಮೊತ್ತ ರಿಕವರಿ ಆಗಬೇಕು ಎಂದರೆ ಹೆಚ್ಚಿನ ಸಂಖ್ಯೆಯಲ್ಲಿ ವೀವ್ಸ್ ಬರಬೇಕು. ಆದರೆ ಒಟಿಟಿಗೆ ಬರುವುದಕ್ಕೂ ಮುನ್ನವೇ ಆನ್​ಲೈನ್​ನಲ್ಲಿ ಲೀಕ್ ಆಗಿರುವುದರಿಂದ ಒಟಿಟಿಯಲ್ಲಿ ಸಿನಿಮಾ ವೀಕ್ಷಿಸುವವರ ಸಂಖ್ಯೆ ಕಡಿಮೆ ಆಗಬಹುದು. ಪೈರಸಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!