TECH | ಇ-ಮೇಲ್ ಸ್ಟೋರೇಜ್ ತುಂಬಿ ಹೋಗಿದ್ಯಾ? ಹೀಗೆ ಮಾಡಿದ್ರೆ ಅನಗತ್ಯ ಮೇಲ್ಸ್ ಡಿಲೀಟ್ ಆಗುತ್ತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ದಿನಗಳಲ್ಲಿ ಪ್ರತಿಯೊಂದು ಕೆಲಸಕ್ಕೂ ಇ-ಮೇಲ್ ಅಡ್ರೆಸ್ ಕೊಡಬೇಕಾಗುತ್ತೆ. ಇನ್ನು ಫೋನ್ ನಂಬರ್, ಆಧಾರ್ ಡೀಟೇಲ್ಸ್ ಕೊಟ್ಟರೆ ಅದಕ್ಕೆ ಲಿಂಕ್ ಆಗಿರುವ ಇ-ಮೇಲ್ ನಲ್ಲಿ ನಮ್ಮ ಅನುಮತಿ ಇಲ್ಲದೇ ಕಂಪನಿಗಳು, ಅಡ್ವರ್ಟೈಸಿಂಗ್ ಏಜೆನ್ಸಿಗಳು ನಮಗೆ ಇ-ಮೇಲ್ಸ್ ಕಳಿಸ್ತಾ ಇರ್ತಾರೆ. ಇದರಿಂದಾಗಿ ಮೇಲ್ ಇನ್‌ಬಾಕ್ಸ್ ತುಂಬಿ ಹೋಗುತ್ತವೆ. ಅದಕ್ಕೆ ಇಮೇಲ್ಸ್‌ನ್ನು ಒಂದೇ ಸಲ ಡಿಲೀಟ್ ಮಾಡುವ ಆಪ್ಷನ್ ನಿಮಗೆ ತುಂಬಾ ಉಪಯೋಗವಾಗುತ್ತೆ. ಅದು ಹೇಗೆ ಅಂತ ನೋಡೋಣ.

1. ಲಾಗಿನ್ ಆಗಿ Gmail ಓಪನ್ ಮಾಡಿ.

2. inboxಗೆ ಹೋಗಿ.

ಪ್ರೈಮರಿ/ಸೋಶಿಯಲ್/ಪ್ರಮೋಷನ್ಸ್ ಟ್ಯಾಬ್‌ಗೆ ಹೋಗಿ.

ಪೇಜ್ ಮೇಲ್ಭಾಗದಲ್ಲಿ “Select All” (✓) ಬಾಕ್ಸ್ ಮೇಲೆ ಕ್ಲಿಕ್ ಮಾಡಿ.

“Select all conversations in this folder” ಅನ್ನೋ ಆಪ್ಷನ್ ಮೇಲೆ ಕ್ಲಿಕ್ ಮಾಡಿ.

3. ಮೇಲ್ಭಾಗದಲ್ಲಿ Trash/Delete ಐಕಾನ್ ಮೇಲೆ ಕ್ಲಿಕ್ ಮಾಡಿ.

4. Trash ಫೋಲ್ಡರ್‌ಗೆ ಹೋಗಿ Empty Trash Now ಕ್ಲಿಕ್ ಮಾಡಿ.

ಒಂದೇ ಸಲಕ್ಕೆ ಎಲ್ಲ ಇಮೇಲ್ಸ್ ಡಿಲೀಟ್ ಆಗಿ ಬಿಡುತ್ತವೆ.

ಎರಡನೇ ವಿಧಾನ ಏನಂದ್ರೆ:

ಬ್ರೌಸರ್‌ನಲ್ಲಿ ಜಿಮೇಲ್ ಓಪನ್ ಮಾಡಿ.

ಇನ್‌ಬಾಕ್ಸ್ ಮೇಲೆ ಕ್ಲಿಕ್ ಮಾಡಿ.

ಮೇಲೆ ಕಾಣಿಸ್ತಿರೋ ಸರ್ಚ್ ಬಾಕ್ಸ್‌ನಲ್ಲಿ ‘Unsubscribe’ ಅಂತ ಟೈಪ್ ಮಾಡಿ ಎಂಟರ್ ಕೊಡಿ.

ಎಲ್ಲಾ ಪ್ರಮೋಷನಲ್ ಇಮೇಲ್ಸ್ ಕಾಣಿಸುತ್ತವೆ.

ಈ ಪ್ರಮೋಷನ್ ಇಮೇಲ್ಸ್‌ನ್ನು ಒಂದೇ ಸಲ ಡಿಲೀಟ್ ಮಾಡೋಕೆ, ಮೇಲೆ ಎಡ ಮೂಲೆಯಲ್ಲಿರುವ ಚಿಕ್ಕ ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ. ‘Select all’ ಕ್ಲಿಕ್ ಮಾಡಿ.ಎಲ್ಲಾ ಇ-ಮೇಲ್ಸ್ ಸೆಲೆಕ್ಟ್ ಆದ್ಮೇಲೆ, ಸ್ಕ್ರೀನ್ ಮೇಲೆ ಇರೋ ಟ್ರಾಷ್ ಐಕಾನ್ ಮೇಲೆ ಕ್ಲಿಕ್ ಮಾಡಿ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!